Asianet Suvarna News Asianet Suvarna News

ಮತ ಹಾಕದ ಬೆಂಗಳೂರಿಗರಿಗೆ ಶ್ರದ್ಧಾಂಜಲಿ, ಎಲ್ಲೋದ್ರಪ್ಪಾ?

ಸಿಲಿಕಾನ್ ಸಿಟಿ, ರಾಜಧಾನಿ, ಬೆಂಗಳೂರು ಮಹಾನಗರದ ಪ್ರಜ್ಞಾವಂತ ಪ್ರಜೆಗಳು ಮತದಾನ ಮಾತ್ರ ಮಾಡಿಲ್ಲ. ಈಗಾಗಲೇ ಸೋಶಿಯಲ್ ಮೀಡಿಯಾ ಸತ್ ಪ್ರಜೆಗಳಿಗೆ ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಲೆ ಇದೆ.

Once again Bangalore Voting Percentage decrease
Author
Bengaluru, First Published Apr 18, 2019, 11:04 PM IST

ಬೆಂಗಳೂರು[ಏ. 18] ಎಲ್ಲದರಲ್ಲೂ ನಂಬರ್ ಒನ್ ಎಂದು ತಮ್ಮಬೆನ್ನು ತಾವೆ  ತಟ್ಟಿಕೊಳ್ಳುವ ಮಹಾನಗರದ ಜನ ಮತಗಟ್ಟೆಗೆ ಮಾತ್ರ ಬರಲೇ ಇಲ್ಲ. ಗ್ರಾಮೀಣ ಭಾಗದಲ್ಲಿ ನಾಲ್ಕಾರು ಕಿ.ಮೀಗೆ ಒಂದು ಮತಗಟ್ಟೆ ಇದ್ದರೂ ಅದೆಷ್ಟೋ ಜನ ತಮ್ಮ ಹಕ್ಕು ಚಲಾಯಿಸಿ ಬಂದರು. ಉದ್ಯೋಗಕ್ಕಾಗಿ ಮಹಾನಗರಕ್ಕೆ ಬಂದವರು ಮತ ಹಾಕುವುದಕ್ಕೋಸ್ಕರವೇ ಊರಿಗೆ ಹೋಗಿ ಪ್ರಜಾಪ್ರಭುತ್ವದ ಸಾರ ಮೆರೆದರು.. ಆದರೆ ಬೆಂಗಳೂರಿಗರು!

ಮನೆ ಪಕ್ಕದಲ್ಲಿಯೇ ಮತದಾನ ಕೇಂದ್ರವಿದ್ದರೂ ಇವರಿಗೆ ಎಚ್ಚರ ಆಗಲೇ ಇಲ್ಲ. ಓಡು ಮಾಡಿದ ಬೆಂಗಳೂರಿಗರಿಗೆ ಮೊದಲು ಅಭಿನಂದನೆ ಸಲ್ಲಿಸಬೇಕು.. ಕರ್ತವ್ಯ ಪೂರೖಸಿದ ನಿಮಗೆ  ವಂದನೆ.. ಓಟು ಮಾಡದವರಿಗೆ...!

ಕರ್ನಾಟಕದ ಮೊದಲ ಹಂತದ ಮತದಾನ: ಯಾವ-ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ವೋಟಿಂಗ್..?

ಪುಕ್ಕಟೆ ರಜಾ ಸಿಕ್ಕಿತು ಎಂದು ಕಾರು ಹತ್ತಿ ಪ್ರವಾಸಿ ತಾಣಕ್ಕೆ ಹೋಗಿ ಅಲ್ಲಿ ದಿನಗಟ್ಟಲೆ ಕಳೆಯುವವರಿಗೆ ಮನೆ ಪಕ್ಕದ ಬೂತ್ ಗೆ ಹೋಗಲು ಸಮಯಾವಕಾಶ ಆಗಲೇ  ಇಲ್ಲ.  2014 ರ ಲೋಕಸಭಾ ಚುನಾವಣೆಗೆ ಹೊಲೀಸಿದರೆ  ಮಹಾನಗರದ ನಾಗರಿಕರು ಮತ್ತು ಒಂದೂ ಹೆಜ್ಜೆ ಹಿಂದಕ್ಕೆ ಇಟ್ಟಿದ್ದಾರೆ.

ಬೆಂಗಳೂರು ಕೇಂದ್ರ-55.64 %, ಬೆಂಗಳೂರು ಉತ್ತರ-56.53 %, ಬೆಂಗಳೂರು ದಕ್ಷಿಣ-55.75 %,  ಬೆಂಗಳೂರು ಗ್ರಾಮಾಂತರ-66.45 %.. ಇದು ಕಳೆದ ಲೋಕಸಭಾ ಚುನಾವಣೆಯಲ್ಲಾದ ಮತದಾನದ ಲೆಕ್ಕ..

ವೋಟ್ ಮಾಡದೆ ಬಂದ ಬೆಂಗಳೂರಿಗರಿಗೆ ಚಿಕ್ಕಮಗಳೂರಲ್ಲಿ ಆತ್ಮೀಯ ಸನ್ಮಾನ!

ಬೆಂಗಳೂರು ಸೆಂಟ್ರಲ್: 49.75%,  ಬೆಂಗಳೂರು ಉತ್ತರ:50.51%, ಬೆಂಗಳೂರು ದಕ್ಷಿಣ: 54.12%,  ಬೆಂಗಳೂರು ಗ್ರಾಮಾಂತರ: 64.09% ಇದು ಈ ಸಾರಿಯ ಲೆಕ್ಕ... ಅಂದರೆ  ಎಲ್ಲಾ ಕ್ಷೇತ್ರದಲ್ಲಿಯೂ ಕಡಿಮೆ ಮತದಾನ. ಚುನಾವಣಾ ಆಯೋಗ ಅದೆಷ್ಟೋ ಪ್ರಯತ್ನ ಮಾಡಿದರೂ ಮಹಾನಗರದ ಜನರಿಗೆ ಮಾತ್ರ ಬಿಸಿ ಮುಟ್ಟಿಲ್ಲ.

Follow Us:
Download App:
  • android
  • ios