Asianet Suvarna News Asianet Suvarna News

ಮಂಗಳೂರು ಮೀನುಗಾರರ ನಾಪತ್ತೆ ಕೇಸ್ : ಸದ್ಯ ಪರಿಹಾರ ಅಸಾಧ್ಯ ಎಂದ ಸಚಿವ

ಮಂಗಳೂರಿನಲ್ಲಿ ಮೀನುಗಾರರು ನಾಮಪತ್ತೆಯಾಗಿ ಕೆಲ ತಿಂಗಳುಗಳೇ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಆದರೆ ಅವರ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆ ಮಿಸ್ಸಿಂಗ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. 

No chance of getting solution for Mangalore Fishermen missing says Minister
Author
Bengaluru, First Published Apr 12, 2019, 12:11 PM IST

ವಿಜಯಪುರ : ಮಂಗಳೂರಿನಲ್ಲಿ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ರೀತಿಯಾದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. 

ಮಿಸ್ಸಿಂಗ್ ಬಗ್ಗೆ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ. ಅವರು ಎಲ್ಲಿ ಹೋದರು ಎನ್ನುವುದರ ಬಗ್ಗೆಯೂ ಕೂಡ ತಿಳಿದಿಲ್ಲ. ಆದ್ದರಿಂದ ಸದ್ಯಕ್ಕೆ ಪರಿಹಾರ ನೀಡಲಾಗದು ಎಂದರು. 

ಕಾನೂನಿನ ಪ್ರಕಾರ ನಾಪತ್ತೆಯಾಗಿ 10 ವರ್ಷಗಳು ಕಳೆದರೆ ಮಾತ್ರ ನಾಪತ್ತೆ ಎಂದು ಪರಿಹಾರ ನೀಡಲು ಸಾಧ್ಯ. ತಾತ್ಕಾಲಿಕವಾಗಿ ಮೀನುಗಾರರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡಲಾಗಿದೆ ಎಂದು ಸಚಿವರು ಹೇಳಿದರು. 

ಮೈತ್ರಿ ಸರ್ಕಾರ ಐಸಿಯುನಲ್ಲಿದ್ದು, ಅಜ್ಜ ಮೊಮ್ಮಕ್ಕಳು ಸೋಲುತ್ತಾರೆ ಎನ್ನುವ  ಬಿ.ಎಸ್ ಯಡಿಯೂರಪ್ಪ ಹೇಳಿಕೆ ವಿರುದ್ಧವೂ ವಾಗ್ದಾಳಿ ನಡೆಸಿದ ನಾಡಗೌಡ  ಚುನಾವಣೆ ನಂತರ ಯಡಿಯೂರಪ್ಪ ಅಡ್ವಾಣಿ ಜಾಗಕ್ಕೆ ಬರುತ್ತಾರೆ.  ಕೊನೆಯ ಹಂತರ ನಾಯಕರಾಗುತ್ತಾರೆ ಎಂದು ಪರೋಕ್ಷವಾಗಿ ಮೂಲೆ ಗುಂಪಾಗುತ್ತಾರೆ ಎಂದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios