ಶಿರಡಿ[ಏ.28]: ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಆಯಾಸದಿಂದ ಕುಸಿದು ಬಿದ್ದ ಘಟನೆ ಶನಿವಾರ ಇಲ್ಲಿ ನಡೆದಿದೆ.

ಶಿರಡಿಯ ಶಿವಸೇನಾ ಅಭ್ಯರ್ಥಿ ಸದಾಶಿವ ಲೋಖಂಡೆ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಬಳಿಕ ತಮ್ಮ ಕುರ್ಚಿಗೆ ಮರಳಿದ ಗಡ್ಕರಿ ಬಳಲಿಕೆಯಿಂದ ಕುಸಿದರು. ಕೂಡಲೇ ಅಹಮದ್‌ನಗರ ಬಿಜೆಪಿ ಅಭ್ಯರ್ಥಿ ಸುಜಯ್‌ ವಿಕೆ ಪಾಟೀಲ, ಸಚಿವ ರಾಮ್‌ ಶಿಂಧೆ ಅವರ ನೆರವಿಗೆ ಧಾವಿಸಿದರು.

ರಾಷ್ಟ್ರಗೀತೆ ವೇಳೆ ವೇದಿಕೆಯಲ್ಲೇ ಕುಸಿದ ಗಡ್ಕರಿ: ವಿಡಿಯೋ!

ನಂತರ ಕೆಲವೇ ನಿಮಿಷಗಳಲ್ಲಿ ಸುಧಾರಿಸಿಕೊಂಡ ಗಡ್ಕರಿ ಚಿಕಿತ್ಸೆ ಪಡೆದು ಸಂಜೆಗೆ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಗಡ್ಕರಿ ನಾಗಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.