ಅಹ್ಮದ್‌ನಗರ್(ಡಿ.07): ಕೇಂದ್ರ ಸಚಿವ ನಿತಿನ್ ಗಡ್ಕರಿ ವೇದಿಕೆಯಲ್ಲೇ ಕುಸಿದು ಬಿದ್ದ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ್‌ದಲ್ಲಿ ನಡೆದಿದೆ.

ಇಲ್ಲಿನ ಮಹಾತ್ಮಾ ಪುಲೆ ಕೃಷಿ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ನಿತಿನ್ ಗಡ್ಕರಿ, ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ.

ಕೂಡಲೇ ಭದ್ರತಾ ಸಿಬ್ಬಂದಿ ಮತ್ತು ಇತರ ಗಣ್ಯರು ಗಡ್ಕರಿ ಅವರನ್ನು ಹಿಡಿದುಕೊಂಡರು. ಆದರೆ ತೀವ್ರ ಅಸ್ವಸ್ಥರಾದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

"

ಗಡ್ಕರಿ ತಮ್ಮ ಭಾಷಣ ಮುಗಿಸಿ ಮರಳಿ ತಮ್ಮ ಆಸನಕ್ಕೆ ಬಂದು ಕುಳಿತ ಕೆಲವೇ ಕ್ಷಣದಲ್ಲಿ ರಾಷ್ಟ್ರಗೀತೆ ಪ್ರಾರಂಭವಾಗಿದೆ. ಈ ವೇಳೆ ಎದ್ದುನಿಂತ ಗಡ್ಕರಿ ತಲೆಸುತ್ತಿ ಬಿದ್ದಿದ್ದಾರೆ. ಗಡ್ಕರಿ ಆವರಿಗೆ ಲೋ ಶುಗರ್ ಆದ ಪರಿಣಾಮ ಕುಸಿದು ಬಿದ್ದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮಧ್ಯೆ ತಮ್ಮ ಆರೋಗ್ಯದ ಕುರಿತು ಟ್ವೀಟ್ ಮಾಡಿರುವ ಗಡ್ಕರಿ, ಯಾರೂ ಭಯಪಡುವ ಅವಶ್ಯಕತೆ ಇಲ್ಲ, ನಾನು ಆರೋಗ್ಯವಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.