ಮಂಡ್ಯ[ಮಾ. 22]  ರೋಡ್ ಶೋ ವೇಳೆ ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.

ರೋಡ್ ಶೋ ವೇಳೆ ನಿಖಿಲ್ ಹಿಂಬಾಲಿಸುತ್ತಿದ್ದ ಕಾರ್ ಮೇಲೆ ಕಲ್ಲುತೂರಾಟ ನಡೆದಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೆಆರ್ ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು  ಜೆಡಿಎಸ್ ಮುಖಂಡ ಜಗದೀಶ್ ಎಂಬುವರ ಕಾರ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.

ಮಂಡ್ಯ ಕಣದಲ್ಲಿ ಸುಮಲತಾ ಅಂಬರೀಶ್ ಗೆ ಮತ್ತಷ್ಟು ಬಲ, ಮಾ.24ಕ್ಕೆ ಅಧಿಕೃತ ಘೋಷಣೆ

10 ಜನರ ದುಷ್ಕರ್ಮಿಗಳ ತಂಡ ಕಲ್ಲು ತೂರಾಟ ನಡೆಸಿದ್ದು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.  ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಪ್ರಚಾರ ಸಭೆ  ನಡೆಸಲು ನಿಖಿಲ್ ತೆರಳುತ್ತಿದ್ದರು.