Asianet Suvarna News Asianet Suvarna News

ರಾಜಕೀಯ ಗುರುವಿನ ಕ್ಷೇತ್ರದಿಂದಲೂ ಮೋದಿ ಸ್ಪರ್ಧೆ?

ಮಧ್ಯಪ್ರದೇಶದಲ್ಲಿ ಮೋದಿ ಸ್ಪರ್ಧೆಯ ದಟ್ಟ ಊಹಾಪೋಹ| ಇಂದೋರ್‌, ಭೋಪಾಲ್‌ ಮೇಲೂ ಮೋದಿ ಕಣ್ಣು?| ಅಟಲ್‌, ಸುಷ್ಮಾ ಪ್ರತಿನಿಧಿಸಿದ್ದ ವಿದಿಶಾದಿಂದಲೂ ಮೋದಿ ಸ್ಪರ್ಧೆ?

Narendra Modi May Contest From vajpayee and Sushma s Vidisha
Author
Bangalore, First Published Apr 13, 2019, 9:12 AM IST

ಭೋಪಾಲ್‌[ಏ.13]: ಮಧ್ಯಪ್ರದೇಶದ ಭೋಪಾಲ್‌, ಇಂದೋರ್‌ ಹಾಗೂ ವಿದಿಶಾ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಇನ್ನೂ ಪ್ರಕಟಿಸದೇ ಇರುವುದು ನಾನಾ ಊಹಾಪೋಹಗಳಿಗೆ ನಾಂದಿ ಹಾಡಿದೆ. ಈ ಕ್ಷೇತ್ರಗಳ ಪೈಕಿ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸಬಹುದು ಎಂಬ ಸುದ್ದಿಗಳು ಇಲ್ಲಿ ತೇಲಿ ಬರುತ್ತಿವೆ.

ಈಗಾಗಲೇ ವಾರಾಣಸಿಯಲ್ಲಿ ಮೋದಿ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿದೆಯಾದರೂ, ಮೋದಿ ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಯಾವುದೇ ಹೇಳಿಕೆಯನ್ನು ಕೊಟ್ಟಿಲ್ಲ. ಹೀಗಾಗಿ ಈ ಮೂರು ಕ್ಷೇತ್ರಗಳ ಮೇಲೆ ಮೋದಿ ಕಣ್ಣಿದೆ ಎಂಬ ವರ್ತಮಾನಗಳು ಹರಿದಾಡುತ್ತಿವೆ. ಸ್ಥಳೀಯ ಬಿಜೆಪಿ ಘಟಕಗಳು ಕೂಡ ಮೋದಿ ಅವರಿಗೆ ‘ಇಲ್ಲಿಂದ ಸ್ಪರ್ಧಿಸಿ’ ಎಂದು ಒತ್ತಾಯಿಸುತ್ತಿವೆ.

ವಿದಿಶಾ ಕ್ಷೇತ್ರವನ್ನು ಈ ಹಿಂದೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ಪ್ರತಿನಿಧಿಸಿದ್ದರು. ಬಳಿಕ ಮಧ್ಯಪ್ರದೇಶ ಮುಖ್ಯಮಂತ್ರಿ ಆಗುವ ಮುನ್ನ ಶಿವರಾಜ್‌ ಸಿಂಗ್‌ ಚೌಹಾಣ್‌ ಹಾಗೂ ನಂತರದ 2 ಅವಧಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಈ ಕ್ಷೇತ್ರದ ಸಂಸದೆಯಾಗಿದ್ದರು. ಈಗ ಸುಷ್ಮಾ ಅವರು ಚುನಾವಣಾ ನಿವೃತ್ತಿ ಪ್ರಕಟಿಸಿದ ಕಾರಣ ಈ ಸ್ಥಾನ ಖಾಲಿ ಬಿದ್ದಿದೆ.

ಇನ್ನು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ ಸಿಂಗ್‌ ಸ್ಪರ್ಧಿಸಲು ನಿರ್ಧರಿಸಿರುವ ಭೋಪಾಲ್‌ ಕ್ಷೇತ್ರಕ್ಕೂ ಈವರೆಗೂ ಬಿಜೆಪಿ ಅಭ್ಯರ್ಥಿ ಪ್ರಕಟಿಸಿಲ್ಲ. 75 ದಾಟಿದ್ದಕ್ಕೆ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಇಂದೋರ್‌ ಟಿಕೆಟ್‌ ನಿರಾಕರಣೆಯಾಗಿರುವ ಕಾರಣ ಆ ಕ್ಷೇತ್ರಕ್ಕೂ ಈವರೆಗೆ ಬಿಜೆಪಿ ಹುರಿಯಾಳು ಘೋಷಣೆ ಆಗಿಲ್ಲ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios