ಗುರುವಾರದ ಇಡೀ ದಿನದ ಬೆಳವಣಿಗೆಗಳು ರಾಜ್ಯದ ವಿವಧೆಡೆ ನಡೆದ ಐಟಿ ದಾಳಿ ಸುತ್ತವೆ ಗಿರಕಿ ಹೊಡೆದವು.  ಸಿಎಂ ಕುಮಾರಸ್ವಾಮಿ ಈ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪ ಮಾಡಿದರು.

ಬೆಂಗಳೂರು[ಮಾ. 28] ರಾಜ್ಯದ ವಿವಿಧೆಡೆ ನಡೆದಿರುವ ಆದಾಯ ತೆರಿಗೆ ಇಲಾಖೆ ದಾಳಿ ಹಿಂದೆ ರಾಜಕಾರಣದ ಪ್ರಭಾವ ಇದೆ ಎಂದು ಸಿಎಂ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.

ಐಟಿ ದಾಳಿಗೂ ನನಗೂ ಏನು ಸಂಬಂಧ?: ಸುಮಲತಾ ಕಿಡಿ!

ಸರಣಿ ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್, ಎರಡು ತಿಂಗಳ ಹಿಂದೆ ಸಿನಿಮಾ ರಂಗದ ಕೆಲವರ ಮೇಲೆ ಐಟಿ ದಾಳಿ ನಡೆದಾಗ ಅದು ರಾಜಕೀಯ ಪ್ರೇರಿತ ಅಲ್ಲ ಎಂದು ಸ್ವತಃ ಹೇಳಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ಇಂದು ಕಂಟ್ರಾಕ್ಟರ್ ಗಳು ನಗದು ಮತ್ತು ಚಿನ್ನದೊಂದಿಗೆ ಸಿಕ್ಕಿಬಿದ್ದಿರುವಾಗ ರಾಜಕೀಯ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

Scroll to load tweet…