ಬೆಳಗಾವಿ(ಮಾ. 18]   ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ಸರ್ಕಾರಿ ಕಟ್ಟಡದ‌ ಮುಂದೆ ಬಹಿರಂಗ ಸಭೆ‌ ಮಾಡಿದ್ದಾರೆ.

ಅಪ್ಪ ನಂಗೆ ವೋಟ್ ಹಾಕಿದ್ದಾರೆ ಎನ್ನುವ ವಿಶ್ವಾಸ ನನಗಿಲ್ಲ ಎಂದ ಹೆಗಡೆಗೆ ಸಿದ್ದು ಗುದ್ದು

ಗ್ರಾಮದ ಸರ್ಕಾರಿ ಗ್ರಂಥಾಲಯದ ಮುಂದೆ ಸಭೆ ನಡೆಸಿ ಹೆಗಡೆ ಭಾಷಣ ಮಾಡಿದ್ದಾರೆ. ಮಾ. 17 ರಂದು ಸಭೆ ನಡೆಸಿ ಕೇಂದ್ರ ಸಚಿವ ಅನಂತಕುಮಾರ್ ಮತಯಾಚನೆ ಮಾಡಿದ್ದಾರೆ. ಆದರೆ ಈ ಕುರಿತು ಯಾವುದೇ ಯಾವುದೆ ದೂರನ್ನು ಅಧಿಕಾರಿಗಳು ದಾಖಲಿಸಿಕೊಂಡಿಲ್ಲ. 

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನಂತ್ ಕುಮಾರ್ ಹೆಗಡೆ ಪ್ರಚಾರ ಆರಂಭಿಸಿದ್ದಾರೆ.  ದೋಸ್ತಿಗಳು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.