Asianet Suvarna News Asianet Suvarna News

2047ಕ್ಕೆ ಮೋದಿಯ ಆಶಯವೇನು?: ಬಹಿರಂಗಪಡಿಸಿದ ನಿರ್ಮಲಾ ಸೀತಾರಾಮನ್

2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು ಶತಮಾನೋತ್ಸವ ಆಚರಣೆ ಮಾಡುವ ವೇಳೆಗೆ ಭಾರತ ಹೇಗಿರಬೇಕು..? ಮೋದಿ ಆಶಯ ಏನಾಗಿದೆ? ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಬಹಿರಂಗಪಡಿಸಿದ್ದಾರೆ.

Minister Nirmala Sitharaman to campaign for BY Raghavendra at Shivamogga
Author
Bengaluru, First Published Apr 15, 2019, 3:58 PM IST

ಶಿವಮೊಗ್ಗ, (ಏ.15): ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಸೋಮವಾರ) ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರ ಭರ್ಜರಿ ಪ್ರಚಾರ ಮಾಡಿದರು.

ಈ ವೇಳೆ ಸಮಾವೇಶದಲ್ಲಿ ಮಾತನಾಡಿದ ಅವರು, '2047 ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು ಶತಮಾನೋತ್ಸವ ಆಚರಣೆ ಮಾಡುವ ವೇಳೆ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಬೇಕೆಂಬುವುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ' ಎಂದು ಹೇಳಿದರು.

ಶಿವಮೊಗ್ಗದಲ್ಲಿ ದೋಸ್ತಿ ಪಡೆಗೆ ಆಘಾತ, ಬಿಜೆಪಿಗೆ ಮುತ್ಸದ್ಧಿ ಮೊಮ್ಮಗ

ಪ್ರಧಾನಿ ನರೇಂದ್ರ ಮೋದಿಯವರು ಒಂದು ಮಾಣಿಕ್ಯ. ಅದನ್ನು ಉಳಿಸಿಕೊಳ್ಳ ಬೇಕು. ಮೋದಿಯಂತಹ ಮಾಣಿಕ್ಯ ಎಲ್ಲಾ ಸಮಯದಲ್ಲಿ ಸಿಗೊಲ್ಲ. ಮತದಾನದ ದಿನ ಇಡೀ ಕುಟುಂಬ ಸದಸ್ಯರು ಒಗ್ಗೂಡಿ ಮೋದಿ ಪರ ಮತ ಚಲಾಯಿಸಿ ಎಂದು ಜನರಲ್ಲಿ ಮನವಿ ಮಾಡಿದರು.

2014 ರಲ್ಲಿ ಬೇಳೆ ಮೊದಲಾದ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿತ್ತು. ಭಾರತದಲ್ಲಿ ಅಗತ್ಯದಷ್ಟು ಬೇಳೆಕಾಳುಗಳ ಉತ್ಪಾದನೆ ಆಗುತ್ತಿರಲಿಲ್ಲ ಹೀಗಾಗಿ ಅಮದು ಮಾಡಿಕೊಳ್ಳಬೇಕಾಗಿತ್ತು ಎಂದು ತಿಳಿಸಿದರು.

ಮೋದಿಯವರು ದೇಶದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಿದರು. ಇಂತಹ ದೂರದೃಷ್ಟಿ ಮತ್ತು ಅದರ ಸಫಲತೆಗಾಗಿ ಮೋದಿ ಶ್ರಮಿಸುತ್ತಿದ್ದಾರೆ ಎಂದು ತಮ್ಮ ಸರ್ಕಾರದ ಕಾರ್ಯ ವೈಖರಿಯನ್ನು  ಜನರ ಮನ ಮುಟ್ಟುವಂತೆ ಹೇಳಿದರು.

Follow Us:
Download App:
  • android
  • ios