ಶಿವಮೊಗ್ಗ[ಏ. 07]  ಹಿರಿಯ ಸಮಾಜವಾದಿ ಶಾಂತವೇರಿ ಗೋಪಾಲ ಗೌಡರ ಮೊಮ್ಮಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ತೀರ್ಥಹಳ್ಳಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನ ತೊರೆದಿದ್ದ ಆರ್. ಮದನ್ ಬಿಜೆಪಿ ಸೇರಿದ್ದಾರೆ.

2009 ರ ವಿಧಾನ ಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 22 ಸಾವಿರ ಮತಗಳನ್ನು ಪಡೆದು ಜೆಡಿಎಸ್ ಗೆ ನೆಲೆ ಒದಗಿಸಿದ್ದ ಮದನ್  ಬಿಜೆಪಿ ಸೇರಿರುವುದು ಸಹಜವಾಗಿ ದೋಸ್ತಿ ಪಡೆಗೆ ಆಘಾತ ನೀಡಿದೆ.

ಸಭೆಯಲ್ಲಿಯೇ ಜಮೀರ್ ಗೆ ದೊಡ್ಡ ಜವಾಬ್ದಾರಿ ಬಿಟ್ಟು ಕೊಟ್ಟ ದೇವೇಗೌಡರು

ಜೆಡಿಎಸ್ ತೊರೆದಿದ್ದ ಮದನ್ ಕಾಂಗ್ರೆಸ್ ಸೇರುವ ನಿರೀಕ್ಷೆಯಲ್ಲಿದ್ದ ಮೈತ್ರಿ ಕೂಟಕ್ಕೆ ಶಾಕ್ ನೀಡಿದ್ದಾರೆ. ತೀರ್ಥಹಳ್ಳಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಮೂರ್ತಿ, ತೀರ್ಥಹಳ್ಳಿ ಪುರಸಭೆ ಅಧ್ಯಕ್ಷ ಸಂದೇಶ ಜವಳಿ , ತಾಲ್ಲೂಕು ಅಧ್ಯಕ್ಷ ಮೋಹನ್ ಸಮ್ಮುಖದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಮದನ್ ಪಡೆದಿದ್ದಾರೆ.