ಶಿವಮೊಗ್ಗ[ ಏ. 19] ಪ್ರಧಾನ ಮಂತ್ರಿಗಳಿಗೆ ಉತ್ತರ ಕೂಡುವ ದೃಷ್ಟಿಯಿಂದ ಇಂದು ಮಾತನಾಡುತ್ತಿದ್ದೇನೆ. ಮೋದಿಯವರು ರಾಜ್ಯಕ್ಕೆ ಬಂದಾಗ ವೀರಶೈವ ಜಾತಿ ವಿಚಾರದ ಬಗ್ಗೆ ಮಾತನಾಡುತ್ತಾರೆ. ಅಷ್ಟು ದೊಡ್ಡ ಸ್ಥಾನದಲ್ಲಿ ಇದ್ದುಕೊಂಡು ತಾನೂ ಏನು ಸಾಧನೆ ಮಾಡಿದ್ದೇನೆ ಎಂದು ಪಟ್ಟಿಕೊಡುವುದಕ್ಕೆ ಆಗದೆ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಧರ್ಮದ ಹಾಗೂ ರೈತರ ವಿಚಾರವನ್ನ ಮಾತನಾಡುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಟೀಕಾ ಪ್ರಹಾರ ನಡೆಸಿದರು.

ಕಾಂಗ್ರೆಸ್ ಪಕ್ಷ ಯಾವ ಧರ್ಮ ಒಡೆಯುವ ವಿಚಾರಕ್ಕೆ ಕೈಹಾಕಿಲ್ಲ. ನಿಮ್ಮ ಪಕ್ಷದ ನಾಯಕರು ಮತ್ತು ಅಖಿಲ ವೀರಶೈವ ಮಹಾಸಭಾದ ಮುಖಂಡರು ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿಯವರನ್ನ ಭೇಟಿ ಮಾಡಿದ್ದರು. ವೀರಶೈವ ಮುಖಂಡರಾದ ಯಡಿಯೂರಪ್ಪ, ಜಗದೀಶ್ ಶಟ್ಟರ್ ಪ್ರಭಾಕರ್ ಕೋರೆ ಹಾಗೂ ಜೆಡಿಎಸ್ ನ ವೀರಶೈವ ಮುಖಂಡರು ವೀರಶೈವ ಸಮಾಜವನ್ನ ಬೇರೆ ವಿಂಗ್ ಮಾಡಿ ಎಂದು ಮನವಿ ಮಾಡಿದ್ದರು ಎಂದರು. 

‘ಮೋದಿಯಿಂದ ನಿರೀಕ್ಷೆ ಹುಸಿ : ಭಾರಿ ಅಂತರದಲ್ಲಿ ಬಿಜೆಪಿಗೆ ಸೋಲು’

ನಾವು ಅದನ್ನ ಮುಂದುವರೆಸಿದ್ದೇವೆ ವಿನಃ ನಾವು ಧರ್ಮ ಒಡೆಯಲು ಕೈಹಾಕಿಲ್ಲ. ಕಾಂಗ್ರೆಸ್ ಪಕ್ಷದ ಮೇಲೆ  ಪ್ರಧಾನ ಮಂತ್ರಿಗಳು ಗೊಬೆ ಕೂರಿಸುತ್ತಿದ್ದಾರೆ. ಪ್ರಧಾನ ಮಂತ್ರಿಯಾಗಿದ್ದವರು ಈ ವಿಷಯ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದಲ್ಲಿ ಸೋಲಿನ ಭೀತಿ ಕಾಡುತ್ತಿದೆ‌ ಎಂದು ದೂರಿದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅರಣ್ಯ ಭೂಮಿ ಹಾಗೂ ಬಗರ್ ಹುಕುಂ ಬಗ್ಗೆ ಒಂದು ಮಾತನಾಡಿಲ್ಲ.  ಅಚ್ಛೇ ದಿನ ಬಂತು ಅಂದಿದ್ದಾರಲ್ಲ ಯಾರಿಗೆ ಬಂದಿದೆ. ರೈತರಿಗೆ ಬಂದಿದೆಯಾ? ಅಥವಾ ಆತನ ಬೆಳೆಗಳಿಗೆ ಬಂದಿದೆಯಾ?  ಐದು ವರ್ಷದಲ್ಲಿ ಒಮ್ಮೆಯೂ ಕೂಡ ರೈತರ ಬಗ್ಗೆ ಮಾತನಾಡಿಲ್ಲ ಎಂದು ಆರೋಪಿಸಿದರು.

ರಾಜಕಾರಣಕ್ಕೋಸ್ಕರ ಯೋಧರ ವಿಷಯ ಬಳಸುತ್ತಿದ್ದಾರೆ. ಎಲ್ಲಾ ಪ್ರಧಾನ ಮಂತ್ರಿಗಳ ಕಾಲದಲ್ಲೂ ಯುದ್ದಗಳು ನಡೆದಿವೆ, ರಾಜಕಾರಣಕ್ಕೆ ಯುದ್ದಗಳನ್ನ ಹಾಗೂ ಯೊಧರನ್ನ ಬಳಸಿಕೊಳ್ಳುತ್ತಿದ್ದಾರೆ ನಾಚಿಕೆಯಾಗಬೇಕು. ಐದು ವರ್ಷದಲ್ಲಿ ಒಂದು ರಿಪೋರ್ಟ್ ಕಾರ್ಡ್ ನೀಡಿಲ್ಲ. ಇವರು ಯಾವ ಸಮುದಾಯಕ್ಕೆ ಕೂಡುಗೆ ನೀಡಿದೆ ಎಂದು ಹೇಳಬೇಕು. ದೇಶದ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಮಾಡುತ್ತಿದೆ. ಎಲ್ಲಿಯೂ ಕೂಡ ಗ್ಲೋಬಲ್ ಇನ್ವೆಸ್ಟ್ ಕಾರ್ಯಕ್ರಮ ಮಾಡಲಿಲ್ಲ. ಕರ್ನಾಟಕದ ರಾಜ್ಯದಲ್ಲಿ ಪ್ರಧಾನಿ, ಹಣಕಾಸು ಸಚಿವ, ಕಾಮರ್ಸ್ ಮಿನಿಸ್ಟರ್ ಎಲ್ಲರೂ ರಾಜ್ಯಕ್ಕೆ ಆಗಮಿಸಿ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಕಾರ್ಯಕ್ರಮ ಮಾಡಿದ್ದರು ಎಂದರು.

ವಿಮಾನ ತಯಾರಿಕೆಯಲ್ಲಿ ಗಂಧಗಾಳಿ ಗೊತ್ತಿಲ್ಲದ ಅಂಬಾನಿಗೆ ರೇಫಲ್ ವಿಮಾನ ಖರೀಧಿ ಮಾಡುವುದಕ್ಕೆ ಟೆಂಡರ್ ಕೊಟ್ಟಿದ್ದೀರಾ? ಇದರಿಂದ  ಸಹಸ್ರ ಸಂಖ್ಯೆಯ  ಕೆಲಸಗಾರರು ಕೆಲಸ ಕಳೆದುಕೊಳ್ಳಲಿದ್ದಾರೆ. ವಿಜಯ್ ಬ್ಯಾಂಕ್ ಅನ್ನು ಬರೋಡಾ ಬ್ಯಾಂಕ್ ನೊಂದಿಗೆ ಲೀನ ಮಾಡಲಾಯಿತು. ವಿಜಯ್ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್, ಬ್ಯಾಂಕ್ ಲಾಭದಲ್ಲಿ ಇರಲಿಲ್ವ. ಇದರ ಬಗ್ಗೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ  ಸೇರಿದಂತೆ ರಾಜ್ಯದ ಸಂಸದರು ಯಾರು ಕೂಡ ಮಾತನಾಡಲಿಲ್ಲ ಎಂದರು.

ಈಶ್ವರಪ್ಪ ನವರನ್ನ ನಾವು ಸೀರಿಯಸ್ ಆಗಿ ತಗೆದುಕೊಂಡಿಲ್ಲ. ಅವರ ಪಕ್ಷದವರೆ ಅವರನ್ನ ಸೀರಿಯಸ್ ಆಗಿ ತಗೆದುಕೊಂಡಿಲ್ಲ. ಅವರು ಈ ಹಿಂದೆ ಏನು ಮಾತನಾಡಿದ್ದಾರೆ ಎಂದು ನಮಗೆಲ್ಲ ಗೊತ್ತಿದೆ. ಮತಕ್ಕಾಗಿ ಅಲ್ಲೊಂದು ಇಲ್ಲೊಂದು ಮಾತನಾಡುತ್ತಾರೆ ಎಂದು  ದೂರಿದರು.