ಮೈಸೂರು(ಮಾ. 29)  ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರೇ ಐಟಿ ದಾಳಿ ನಡೆಯಲು ಷಡ್ಯಂತ್ರ ನಡೆಸಿದ್ದಾರೆ. ದಾಳಿಗೂ ಹಿಂದಿನ ದಿನ ಕೆಆರ್ ಪೇಟೆಯಲ್ಲಿ  ಮಾತನಾಡುತ್ತ ನಾಳೆ ದಾಳಿ ನಡೆಯುತ್ತೆ ಎಂದು ಸುಮಲತಾ ಹೇಳಿಕೆ ನೀಡಿದ್ದರು. ಸುಮಲತಾ ಆ ಹೇಳಿಕೆ ನೀಡಿರುವ ವಿಡಿಯೋ ನಮ್ಮ ಬಳಿ ಇದೆ ಎಂದು ಸಚಿವ ಸಿಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದಾರೆ.

ಅನಂತ್‌ಕುಮಾರ್ ಪತ್ನಿ ತೇಜಸ್ವಿನಿಯವರ ರಾಜಕೀಯ ಭವಿಷ್ಯವನ್ನು ಬಿಜೆಪಿ ಹಾಳು ಮಾಡಿದೆ. ಬಿಜೆಪಿಗೆ ತೇಜಸ್ವಿನಿ ಅವರ ಮೇಲಿಲ್ಲದ ಪ್ರೀತಿ ಸುಮಲತಾ ಅವರ ಮೇಲೆ ಯಾಕೆ? ಎಂದು ಪ್ರಶ್ನೆ ಮಾಡಿದರು.

ಅಪಸ್ವರ ಎತ್ತಿದ್ದ 'ಕೈ' ನಾಯಕ ಪ್ರಜ್ವಲ್ ಪ್ರಚಾರಕ್ಕೆ ಸಾಥ್!

ನಿಖಿಲ್ ನಾಮಪತ್ರ ಕಾರ್ಯಕ್ರಮಕ್ಕೆ ಹಣಕೊಟ್ಟು ಜನ ಸೇರಿಸಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ.  ಇದರಲ್ಲಿ ಯಾವುದೆ ಹುರುಳಿಲ್ಲ ದುಡ್ಡು ಕೊಟ್ಟು ಸೇರಿಸುವ ಬುದ್ದಿ ಎದುರಾಳಿಗಳದ್ದು. ಅವರು ಯಾರ್ಯಾರಿಗೆ, ಎಲ್ಲೆಲ್ಲಿ,  ಎಷ್ಟು ದುಡ್ಡು ಕೊಡ್ತಾರೆ ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದರು.

ನಿಖಿಲ್ ನಾಮಪತ್ರ ಗೊಂದಲ ವಿಚಾರದ ಬಗ್ಗೆ  ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ನಾವೂ ಯಾವತ್ತು ಈ ರೀತಿ ಖ್ಯಾತೆ ತೆಗೆದಿಲ್ಲ ಕೈಲಾಗವರು ಮೈ ಪರಚಿಕೊಳ್ತಿದ್ದಾರೆ ಎಂದು ನಿಖಿಲ್ ನಾಮಪತ್ರ  ಅಸಿಂಧು ಮಾಡಬೇಕೆಂದು ಹೇಳಿದ್ದ ಸುಮಲತಾ ಅಂಬರೀಶ್ ಬೆಂಬಲಿಗರ ಮೇಲೆ ಆಕ್ರೋಶ ಹೊರಹಾಕಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.