ಮಂಡ್ಯ, [ಮಾ.29]: ಮಂಡ್ಯ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬಯಸಿದ್ದ ಚಿಹ್ನೆ ಸಿಕ್ಕಿದೆ. 

ಸುಮಲತಾ ಅವರಿಗೆ ಚುನಾವಣಾ ಆಯೋಗವು 'ರೈತ ಕಹಳೆ ಊದುವ' ಚಿಹ್ನೆ ನೀಡಿದೆ. ಕಬ್ಬಿನಗದ್ದೆ ಮುಂದೆ ರೈತ, ಕಹಳೆ ಊದುತ್ತಿರುವ ರೈತ, ತೆಂಗಿನ ತೋಟ ಚಿಹ್ನೆಗಳ ಪೈಕಿ ಒಂದನ್ನ ಆಯ್ಕೆ ಮಾಡಿಕೊಳ್ಳಬೇಕೆಂದು ಬಯಸಿದ್ದರು. 

ಸುಮಲತಾಗೆ ಕೈಕೊಟ್ಟ ಅದೃಷ್ಟ, ಬಯಸಿದ್ದ ಚಿಹ್ನೆ ಬೇರೆಯವರ ಪಾಲು..!

ಅದರಂತೆ ಸುಮಲತಾಗೆ ಕಹಳೆ ಊದುತ್ತಿರುವ ರೈತ ಚಿಹ್ನೆ ಸಿಕ್ಕಿದೆ. ಈ ಮೂಲಕ ತೆನೆಹೊತ್ತ ಮಹಿಳೆಗೆ ಸೆಡ್ಡು ಹೊಡೆದು ಚಿಹ್ನೆ ಆಯ್ಕೆಯಲ್ಲಿ ಪ್ರಬುದ್ಧತೆ ಮೆರೆದಿದ್ದಾರೆ. 

ಸಂಜೆ ಬಂದ ಮಾಹಿತಿ ಪ್ರಕಾರ ಸುಮಲತಾಗೆ ‘ಕೈಗಾಡಿ’ (ವ್ಯಕ್ತಿಯೋರ್ವ ಬಂಡಿ ತಳ್ಳುತ್ತಿರುವುದು) ಗುರುತಿನ ಚಿಹ್ನೆ ನೀಡಿಲಾಗಿದೆ ಎಂದು ಹೇಳಿಲಾಗಿತ್ತು. ಚುನಾವಣಾ ಆಯೋಗವು ಸುಮಲತಾಗೆ ‘ತಳ್ಳುವ ಗಾಡಿಯ’ ಚಿಹ್ನೆಯನ್ನು ನೀಡಿತ್ತು.

ಆ ಚಿಹ್ನೆ ಸುಮಲತಾ ಅವರಿಗೆ ಬೇಡವಾದ ಕಾರಣ ಈಗ 'ರೈತ ಕಹಳೆ ಊದುವ' ಚಿಹ್ನೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್  ಮೈತ್ರಿ ಅಭ್ಯರ್ಥಿ ಸಿಎಂ ೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಲ್ ಕುಮಾರಸ್ವಾಮಿ ಅಖಾಡದಲ್ಲಿದ್ದು, ಮಂಡ್ಯ ರಣಕಣ ರಂಗೇರಿದೆ.

ಒಟ್ಟಿನಲ್ಲಿ ತೆನೆಹೊತ್ತ ಮಹಿಳೆ ಹಾಗೂ ಕಹಳೆ ಊದುತ್ತಿರುವ ರೈತ ನಡುವಿನ ಹಣಾಹಣಿಗೆ ಸಕ್ಕರೆ ನಾಡು ಮಂಡ್ಯ ಅಖಾಡ ಸಾಕ್ಷಿಯಾಗಿದೆ.