ಬೆಂಗಳೂರು : ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಗಿದಿದ್ದು, ಕೆಲವೇ ದಿನಗಳಿರುವ ಫಲಿತಾಂಶಕ್ಕೆ ಎಲ್ಲರೂ ಕಾತರರಾಗಿದ್ದಾರೆ. ಇದೇ ವೇಳೆ ಸೋಲು ಗೆಲುವಿನ ಲೆಕ್ಕಾಚಾರಗಳೂ ಕೂಡ ಜೋರಾಗಿವೆ. 

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಿಂತಿದ್ದು, ಇಲ್ಲಿನ ಸ್ವಾಮೀಜಿಯೋರ್ವರು ಸುಮಲತಾ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. 

ಈಗಾಗಲೇ ಹಲವು ರೀತಿಯ ಚುನಾವಣಾ ಭವಿಷ್ಯಗಳನ್ನು ನುಡಿದಿದ್ದು, ಇನ್ನೋರ್ವ ಸ್ವಾಮೀಜಿ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದಿದ್ದಾರೆ.   ವಿಭೂತಿಮಠದ ಬಸವಾನಂದ ಸ್ವಾಮೀಜಿ ವಿಜಯದ ಭವಿಷ್ಯ ನುಡಿದಿದ್ದಾರೆ. 

ಮಂಡ್ಯದಲ್ಲಿ ಸುಮಲತಾಗೆ 80 ಸಾವಿರ ಅಂತರದಲ್ಲಿ ಗೆಲುವು : ಸಮೀಕ್ಷೆ

ಬೀದರ್ ಜಿಲ್ಲೆ ಬಸವಕಲ್ಯಾಣದ ಬಸವಧರ್ಮದ ಪ್ರಸಾರಕ ಬಸವಾನಂದ ಸ್ವಾಮಿ ಮಾತೃ ಹೃದಯಿ ಸುಮಲತಾ ಗೆಲ್ಲುವುದರ ಜೊತೆಗೆ ಕೇಂದ್ರ ಸಚಿವರಾಗುವುದು ನಿಶ್ವಿತ.  ಪ್ರಬುದ್ಧ, ಮೃದು ಮಾತಿನಿಂದ ಎಲ್ಲ ಸಮುದಾಯದವರ ಹೃದಯ ಗೆದ್ದಿದ್ದಾರೆ.  ಸುಮಲತಾ ಅಂಬರೀಷ್ ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎಂದರು.

ಅಂತೆಯೇ, ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗುವುದು ಮತ್ತು ಬಿ.ಎಸ್.ಯಡಿಯೂರಪ್ಪ ಮತ್ತೆ ಸಿಎಂ ಆಗುವುದು ಖಚಿತ ಎಂದು ಬೀದರ್ ನಿಂದ ಬಂದು ಮಂಡ್ಯದಲ್ಲಿ ಬಸವಾನಂದಸ್ವಾಮಿ ಭವಿಷ್ಯ ನುಡಿದಿದ್ದಾರೆ.