ಮಂಡ್ಯ : ಈಗಾಗಲೇ ರಾಜ್ಯದಲ್ಲಿ ಚುನಾವಣೆ ಮುಕ್ತಾಯವಾಗಿದ್ದು, ಇನ್ನು ಕೆಲ ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಇದೇ ವೇಳೆ ಮಂಡ್ಯ ಕ್ಷೇತ್ರದ ಬಗ್ಗೆ ಸಮೀಕ್ಷೆಯೊಂದು ಹೊರಬಿದ್ದಿದ್ದು, ಸುಮಲತಾ ಗೆಲುವು ಖಚಿತ ಎಂದು ಹೇಳಿದೆ. 

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಸುಮಲತಾ ಬೆಂಬಲಿಗರಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ‌ ಸಮೀಕ್ಷೆ ನಡೆದಿದೆ.  ಸುಮಲತಾ ಬೆಂಬಲಿಗ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಸಮೀಕ್ಷೆ ನಡೆದಿದ್ದು, ಹಲವು 60 ರಿಂದ 80 ಸಾವಿರ ಲೀಡ್ ನಲ್ಲಿ ಸುಮಲತ ವಿಜಯಿಯಾಗಲಿದ್ದಾರೆ ಎಂದು ಹೇಳಿದ್ದಾರೆ. 

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಖುದ್ದು ಸಮೀಕ್ಷೆ ನಡೆಸಿದ್ದು, ಮದ್ದೂರು, ಮಳವಳ್ಳಿಯಲ್ಲಿ ಅತೀ ಹೆಚ್ಚಿನ ಮುನ್ನಡೆ ಸಾಧಿಸಲಿದ್ದಾರೆ. ಮಂಡ್ಯ, ಶ್ರೀರಂಗಪಟ್ಟಣ, ಕೆಆರ್ ನಗರದಲ್ಲಿ ಅಲ್ಪ ಮುನ್ನಡೆ, ಉಳಿದೆಡೆ ಸಮಬಲದ ಹೋರಾಟ ಎಂದು ವರದಿ ನೀಡಿದ್ದಾರೆ. 

ಕುಂದಗೋಳ ಚುನಾವಣೆ : ಡಿ.ಕೆ ಶಿವಕುಮಾರ್ ಸವಾಲು

ಸತತ 15 ದಿನ, ಪ್ರತಿ ಬೂತ್‌ಗೂ ತೆರಳಿ ಸಮೀಕ್ಷೆ ನಡೆಸಿದ್ದು, ಒಟ್ಟಾರೆ ಸುಮಲತಾ 60 ರಿಂದ 80 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವರದಿ ನೀಡಿದ್ದಾರೆ.  ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 15 ಜನರಂತೆ ಸಮೀಕ್ಷೆ ನಡೆಸಿದ್ದರು.

ಈಗಾಗಲೇ ಹಲವು ರೀತಿಯ ಸಮೀಕ್ಷೆಗಳು ನಡೆಯುತ್ತಿದ್ದು, ಪಕ್ಷಗಳು ಕೂಡ ತಮ್ಮದೇ ಗೆಲುವಿನ ಭರವಸೆಯಲ್ಲಿದ್ದು, ಅದರಂತೆ ಸುಮಲತಾ ಬೆಂಬಲಿಗರೂ ಕೂಡ ವಿಜಯಿಯಾಗುವ ಉತ್ಸಾಹದಲ್ಲಿದ್ದಾರೆ.