ಬೆಂಗಳೂರು[ಏ. 09] ಚುನಾವಣಾ ಆಯೋಗವೇ ಡಿಸಿಗಳನ್ನ ನೇಮಕ ಮಾಡಿದೆ. ಆದರೆ ಈ ಚುನಾವಣೆಯಲ್ಲಿ 6 ಡಿಸಿಗಳನ್ನು ಬದಲಾವಣೆ ಮಾಡಲಾಗಿದೆ. ಮಂಡ್ಯ ಡಿಸಿಯನ್ನು ವರ್ಗಾವಣೆ ಮಾಡಿದ್ದಾರೆ. ನಾಳೆ ಬೇರೆ ಯಾರದರೂ ಈ ಡಿಸಿ ಮೇಲೆ ದೂರು ಕೊಟ್ರೆ ಅವರನ್ನು ಬದಲಾವಣೆ ಮಾಡ್ತೀರಾ? ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನೆ ಕೇಳಿದ್ದಾರೆ.

ಇಂಥ ಚುನಾವಣಾ ಆಯೋಗ ನಾನು ಎಲ್ಲೂ ನೋಡಿಲ್ಲ.  ಚುನಾವಣಾ ಆಯೋಗ, ಇಡಿ,‌ ಸಿಬಿಐ ಮೋದಿ ಆಣತಿಯಂತೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.

ನಮ್ಮ ಜೊತೆ ಚೆಲ್ಲಾಟ ಆಡಬೇಡಿ. ಮಂಡ್ಯಕ್ಕೆ 300 ಜನರ ಕಳಿಸಿ ರೇಡ್ ಮಾಡ್ತೀಯಾ? ಎಲ್ಲಿದ್ದೀಯಾಪ್ಪಾ ಬಾಲಕೃಷ್ಣ.? ಬಾಲಕೃಷ್ಣ ಕೊಟ್ಟಿರುವ ದೂರು ಬಿಜೆಪಿ ಹೆಡ್ ಕ್ವಾಟ್ರಸ್ ನಲ್ಲಿ ಟೈಪ್ ಮಾಡಿರೋದು. ಬಾಲಕೃಷ್ಣ ಬಿಜೆಪಿ ಏಜೆಂಟ್ ಎಂದು ಏಕವಚನದಲ್ಲೇ ಆದಾಯ ತೆರಿಗೆ ಮುಖ್ಯಸ್ಥ ಬಾಲಕೃಷ್ಣ ವಿರುದ್ಧ  ವಾಗ್ದಾಳಿ ನಡೆಸಿದರು.

ಸುಮಲತಾ ಪರ ಮೋದಿ ಬ್ಯಾಟಿಂಗ್ ನಂತರ ಹುಟ್ಟಿಕೊಂಡ ಪ್ರಶ್ನೆಗಳು

ಮೋದಿ ಹಿಟ್ಲರ್, ದೇಶವನ್ನ ಹಾಳು ಮಾಡ್ತಾನೆ. ಡಿಕ್ಟೇಟರ್ ಕ್ಕಿಂತ ಕೆಟ್ಟವನು‌‌ ಮೋದಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೂ ಏಕವಚನ ಪ್ರಯೋಗ ಮಾಡಿದ ಕುಮಾರಸ್ವಾಮಿ, ಶ್ರೀಕಾಂತ್ ಎಂಬಾತ ನನ್ನ ಮನೆಗೆ ಬಂದು ಹೋದಾಗ ,30 ಜನ ಐಟಿ ಅವ್ರು ಅವ್ರನ್ನ ತಪಾಸಣೆ ಮಾಡಿದ್ರು ಫೋನ್ ಚೆಕ್ ಮಾಡಿದರು,, ಇದೆಲ್ಲಾ ಯಾಕೆ? ಎಂದು ಪ್ರಶ್ನೆ ಮಾಡಿದರು.

ಯುವಕರನ್ನು ದಾರಿ ತಪ್ಪಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಮೋದಿ, ಬಿಜೆಪಿ ನಾಯಕರು ಯಾವ ಸಾಧನೆ ಮಾಡಿಲ್ಲ. ದೇಶದ ರಕ್ಷಣೆಯಲ್ಲಿ ಮೋದಿ ಓಟ್ ಕೇಳ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲೂ  ದೇಶದಲ್ಲಿ ರಕ್ಷಣೆ ಇತ್ತು. ನಾನು ಪುಲ್ವಾಮ ದಾಳಿ ಬಗ್ಗೆ ಮಾಜಿ ಯೋಧ ಹೇಳಿದ್ದನ್ನ ನಾನು ಹೇಳಿದ್ದೆ. ಆದರೆ ನನ್ನ ಭಾಷಣ ತಿರುಚಿ ಮಾಧ್ಯಮಗಳು ಪ್ರಸಾರ ಮಾಡಿದವು. ನೀವು ಬೇಕಾದ್ರೆ ನನ್ನ ಭಾಷಣ ಕೇಳಿ ನಿಮಗೆ ಗೊತ್ತಾಗುತ್ತೆ ಎಂದು ಮಾಧ್ಯಮಗಳ ಮೇಲೂ ಸಿಎಂ ಕೆಂಡಕಾರಿದರು.

ಚಿತ್ರದುರ್ಗದಲ್ಲಿ ಮೋದಿ ಭಾಷಣದ ಅಸಲಿ ಹೂರಣ, ವಿಶ್ಲೇಷಣೆ

ದೇಶದ ಬಗ್ಗೆ ಬಿಜೆಪಿ ಅವ್ರು ಮಾತ್ರ ಗುತ್ತಿಗೆ ತಗೊಂಡಿಲ್ಲ. ನಾನು ಕರ್ನಾಟಕದಲ್ಲೇ ಬಾಳುತ್ತೇನೆ. ಕಾಂಗ್ರೆಸ್ 50 ವರ್ಷ ಮಾಡದ ಸಾಧನೆ ನಾನು ಮಾಡಿದೆ ಅಂತ‌‌ ಮೋದಿ ಹೇಳ್ತಾರೆ. ಮೋದಿ 5 ವರ್ಷದಲ್ಲಿ ಏನು ಮಾಡದೆ ಈಗ ಮತ್ತೆಮತ್ತೆ ಅಧಿಕಾರ ಕೊಡಿ‌ ಅಂತ ಹೇಳ್ತಿದ್ದಾರೆ. 1 ಲಕ್ಷ ಸಾಲ ಬಡ್ಡಿ ರಹಿತ ಸಾಲ ಕೊಡ್ತೀನಿ ಅಂತ ಮೋದಿ ಈಗ ಹೇಳ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ 3 ಲಕ್ಷ ರೂ.  ಬಡ್ಡಿ ರಹಿತ ಸಾಲ ಕೊಡುತ್ತಿದ್ದೇವೆ. ಕರ್ನಾಟಕದ ಯೋಜನೆಯನ್ನು ಮೋದಿ ಕಾಪಿ ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.