ನವದೆಹಲಿ(ಮೇ.10): ರೋಡ್ ಶೋ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್'ಗೆ ಕಪಾಳಮೋಕ್ಷ ಮಾಡಿದ ಯುವಕ, ಈ ಕುರಿತು ತನಗೆ ಪಶ್ಚಾತಾಪವಿದೆ ಎಂದು ಖೇದ ವ್ಯಕ್ತಪಡಿಸಿದ್ದಾನೆ.

'ನಾನು ಕೇಜ್ರಿವಾಲ್ ಅವರಿಗೆ ಯಾಕೆ ಹೊಡೆದೆ ಎಂಬುದಕ್ಕೆ ಕಾರಣ ಗೊತ್ತಿಲ್ಲ, ಆದರೆ ನನ್ನ ವರ್ತನೆಯಿಂದ ನನ್ನ ಮನಸ್ಸಿನಲ್ಲಿ ಪಶ್ಚಾತಾಪ ಭಾವನೆ ಮೂಡಿದೆ..'ಎಂದು ಸುರೇಶ್ ಕ್ಷಮೆ ಕೋರಿದ್ದಾನೆ.

ಇದೇ ವೇಳೆ ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂದು ಸ್ಪಷ್ಟಪಡಿಸಿರುವ ಸುರೇಶ್, ಕೇಜ್ರಿವಾಲ್ ಅವರಿಗೆ ಹೊಡೆಯುವಂತೆ ತನಗೆ ಯಾರೂ ಪ್ರೇರೆಪಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.

ಕಳೆದ ಮೇ 4ರಂದು ದೆಹಲಿಯ ಮೋತಿನಗರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಕೇಜ್ರಿವಾಲ್'ಗೆ ಸುರೇಶ್ ಕಪಾಳಮೋಕ್ಷ ಮಾಡಿದ್ದ. ತಕ್ಷಣ ಕೇಜ್ರಿವಾಲ್ ಅವರ ರಕ್ಷಣೆಗೆ ಧಾವಿಸಿದ ಬೆಂಬಲಿಗರು, ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ