ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಕಪಾಳಮೋಕ್ಷ| ಚುನಾವಣಾ ಪ್ರಚಾರದ ವೇಳೆ ಕೇಜ್ರಿಗೆ ಕಪಾಳಮೋಕ್ಷ| ದೆಹಲಿಯಲ್ಲಿ ಪ್ರಚಾರದ ವೇಳೆ ಕೇಜ್ರಿ ಮೇಲೆ ಹಲ್ಲೆ ಮಾಡಿದ ಅಪರಿಚಿತ ಯುವಕ|
ನವದೆಹಲಿ(ಮೇ.04): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಯುವಕನೋರ್ವ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ದೆಹಲಿಯ ಮೋತಿನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕೇಜ್ರಿವಾಲ್ ಗೆ ಅಪರಿಚಿತ ಯುವಕನೋರ್ವ ಕಪಾಳಮೋಕ್ಷ ಮಾಡಿದ್ದಾನೆ.
ಚುನಾವಣಾ ಪ್ರಚಾರದ ವಾಹನದ ಮೇಲೆ ನಿಂತಿದ್ದ ಕೇಜ್ರಿವಾಲ್ ಸನಿಹ ಬಂದ ಯುವಕ, ಎಲ್ಲರ ಸಮ್ಮುಖದಲ್ಲೇ ಕೇಜ್ರಿವಾಲ್ ಗೆ ಕಪಾಳಮೋಕ್ಷ ಮಾಡಿದ್ದಾನೆ.
Scroll to load tweet…
ಈ ವೇಳೆ ಕೇಜ್ರಿವಾಲ್ ರಕ್ಷಣೆಗೆ ಧಾವಿಸಿದ ಬೆಂಬಲಿಗರು, ಯುವಕನನ್ನು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಈ ಹಿಂದೆ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಆಟೋ ಚಾಲಕನೋರ್ವ ಕೇಜ್ರಿವಾಲ್ ಗೆ ಕಪಾಳಮೋಕ್ಷ ಮಾಡಿದ್ದ. ಇತ್ತೀಚಿಗೆ ಕಚೇರಿಯೊಂದರಲ್ಲಿ ಅರವಿಂದ್ ಮೇಲೆ ಆಗುಂತಕನೋರ್ವ ಮಸಿ ಎರಚಿ ಹಲ್ಲೆಗೆ ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
