ಮೊದಲು ಬರ್ತಿನಿ ಎಂದು ಇದೀಗ ಬರಲ್ಲ ಅಂತಿದ್ದಾರೆ ಮಮತಾ ಬ್ಯಾನರ್ಜಿ| ಮೋದಿ ಪ್ರಮಾಣವಚನ ಸಮಾರಂಭಕ್ಕೆ ಬರಲ್ವಂತೆ ಪ.ಬಂಗಾಳ ಸಿಎಂ| ಹತ ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ಆಹ್ವಾನ ಹಿನ್ನೆಲೆ| ಪ್ರಮಾಣವಚನ ಸಮಾರಂಭಕ್ಕೆ ಬರದಿರಲು ಮಮತಾ ನಿರ್ಧಾರ|
ಕೋಲ್ಕತ್ತಾ(ಮೇ.29): ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಬರುವುದಾಗಿ ಹೇಳಿದ್ದ ಮಮತಾ ಬ್ಯಾನರ್ಜಿ, ಇದೀಗ ದಿಢೀರನೇ ತಮ್ಮ ನಿರ್ಧಾರ ಬದಲಿಸಿದ್ದು, ಪ್ರಮಾಣವಚನ ಸಮಾರಂಭಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಬರುವಂತೆ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನೂ ಆಹ್ವಾನಿಸಲಾಗಿತ್ತು. ಈ ಮೊದಲು ಆಹ್ವಾನವನ್ನು ಒಪ್ಪಿಕೊಂಡಿದ್ದ ಮಮತಾ, ಇದೀಗ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Scroll to load tweet…
ಮೋದಿ ಪ್ರಮಾಣವಚನಕ್ಕೆ ಪ.ಬಂಗಾಳದಲ್ಲಿ ನಡೆದ ವಿವಿಧ ಹಿಂಸಾಚಾರ ಪ್ರಕರಣಗಳಲ್ಲಿ ಮೃತಪಟ್ಟ ಸುಮಾರು 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ಆಹ್ವಾನ ನೀಡಲಾಗಿದೆ.
ವಿಶೇಷ ಅತಿಥಿಗಳ ಪಟ್ಟಿಯಲ್ಲಿ ಹತ ಬಿಜೆಪಿ ಕಾರ್ಯಕರ್ತರ ಕುಟುಂಬವನ್ನು ಸೇರಿಸಲಾಗಿದ್ದು, ಇದು ಮಮತಾ ಬ್ಯಾನರ್ಜಿ ಅವರನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.
