ಲೋಕ ಸಮರ : ಬಿಜೆಪಿ ಮೈತ್ರಿ ತೊರೆದು ಕೈ ಹಿಡಿದ ಪಕ್ಷ
ಲೋಕಸಭಾ ಚುನಾವಣೆ ಬೆನ್ನಲ್ಲೇ ಪಕ್ಷವೊಂದು ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಳ್ಳುವುದಾಗಿ ಘೋಷಿಸಿದ್ದು, ಕಾಂಗ್ರೆಸ್ ಬೆಂಬಲ ನೀಡುವುದಾಗಿ ಹೇಳಿದೆ.
ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಅತ್ತ NDA ಒಕ್ಕೂಟ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಪ್ರಯತ್ನದಲ್ಲಿದ್ದರೆ, ಇತ್ತ UPA ಅಧಿಕಾರಕ್ಕೆ ಏರುವ ಯತ್ನದಲ್ಲಿದೆ.
ಆದರೆ ಇದೇ ವೇಳೆ ಗೋವಾದ ಪ್ರಮುಖ ಪಕ್ಷವೊಂದು NDA ಒಕ್ಕೂಟದಿಂದ ಹಿಂದೆ ಸರಿಯುವುದಾಗಿ ಹೇಳಿದೆ. ಇದುವರೆಗೆ ಎನ್ ಡಿಎ ಒಕ್ಕೂಟದೊಂದಿಗೆ ಇದ್ದ ಮಹಾರಾಷ್ಟ್ರವಾಡಿ ಗೋ ಮಂಟಕ್ ಪಕ್ಷ ಚುನಾವಣೆ ಬೆನ್ನಲ್ಲೇ ಶಾಕ್ ನೀಡಿದೆ.
ಈ ಬಗ್ಗೆ ಮಾತನಾಡಿರಯವ ಪಕ್ಷದ ಮುಖ್ಯಸ್ಥ ದೀಪಕ್ ದವಲೀಕರ್, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗೆ ಬೆಂಬಲ ನೀಡಲಾಗುತ್ತದೆ. ಅಲ್ಲದೇ ಮಪುಸಾ ಉಪಚುನಾವಣೆಯಲ್ಲಿಯೂ ಕೂಡ ಕಾಂಗ್ರೆಸ್ ಬೆಂಬಲಿಸಲಾಗುತ್ತದೆ ಎಂದಿದ್ದಾರೆ. ಏಪ್ರಿಲ್ 23ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಮಪುಸಾ ಕ್ಷೇತ್ರಕ್ಕೆ ಉಪ ಚುನಾವಣೆಯೂ ಕೂಡ ಅಂದೇ ನಡೆಯುತ್ತಿದೆ.
ಪ್ರಮೋದ್ ಸಾವಂತ್ ಅವರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದುಕೊಳ್ಳಲಾಗುತ್ತದೆ. ಈ ಬಗ್ಗೆ ಶೀಘ್ರವೇ ಗವರ್ನ್ ಮೃದುಲಾ ಸಿನ್ಹಾ ಅವರಿಗೆ ಪತ್ರ ಬರೆಯಲಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ ಗೋವಾ ನೂತನ ಸಿಎಂ ಪ್ರಮೋದ್ ಸಾವಂತ್ ಅವರಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಸಹ ತಿಳಿದಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುತ್ತೇವೆ. ಆದರೆ ಅವರೂ ಕೂಡ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.