ಭೋಪಾಲ್ :  ವಿವಿಧ ಪ್ರಾದೇಶಿಕ ಪಕ್ಷಗಳ ಜೊತೆಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಹೊಣೆಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ತಮ್ಮ ಆಪ್ತ ಮತ್ತು ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಅವರಿಗೆ ವಹಿಸಿದ್ದಾರೆ ಎನ್ನಲಾಗಿದೆ. 

ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿರುವ ಹೊರತಾಗಿಯೂ, ಎಲ್ಲಾ ಪಕ್ಷಗಳ  ನಾಯಕರ ಜೊತೆ ಕಮಲ್‌ನಾಥ್ ಹಿಂದಿನಿಂದಲೂ ಉತ್ತಮ ಸಂಬಂಧ ಹೊಂದಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 300 ಸೀಟು : ಭವಿಷ್ಯ

ಜೊತೆಗೆ ಅವರು ಪಕ್ಷದ ಒಳಹೊರಗನ್ನೂ ಬಹಳ ಹಿಂದಿನಿಂದಲೂ ಬಲ್ಲವರು, ಚೌಕಾಶಿ ರಾಜಕೀಯದಲ್ಲಿ ಅವರದ್ದು ಎತ್ತಿದ ಕೈ. ಇದೇ ಕಾರಣಕ್ಕಾಗಿಯೇ ಕಮಲ್ ನಾಥ್‌ಗೆ ಈ ಹೊಣೆ ವಹಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.