ನವದೆಹಲಿ:  ದೇಶದಲ್ಲಿ ಇನ್ನು ಒಂದು ಹಂತದ ಲೋಕಸಭಾ ಚುನಾವಣೆ ಬಾಕಿ ಉಳಿದಿದೆ. ಇನ್ನೇನು ಫಲಿತಾಂಶಕ್ಕೆ ದಿನಗಣನೆ ಆರಮಭವಾಗಿದೆ.  ಇದೇ ವೇಳೆ ವಿವಿಧ ಪಕ್ಷಗಳ ನಾಯಕರು ತಮ್ಮದೇ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ದೇಶಾದ್ಯಂತ ಸುತ್ತಿದ ವೇಳೆ ನಾನು ಕಂಡ ಪ್ರತಿಕ್ರಿಯೆ ಆಧರಿಸಿ ಹೇಳುತ್ತಿದ್ದೇನೆ. ಲೋಕಸಭಾ ಚುನಾವಣೆಯ 6ನೇ ಹಂತ ಮುಗಿಯುವಷ್ಟರಲ್ಲೇ ನಾವು ಬಹುಮತಕ್ಕೆ ಅಗತ್ಯವಾದ ಸ್ಥಾನ ಗೆದ್ದುಕೊಂಡಿದ್ದೇವೆ. 7ನೇ ಹಂತದಲ್ಲಿ ನಾವು 300 ಸ್ಥಾನಗಳನ್ನು ದಾಟಿ ಮುಂದೆ ಹೋಗಲಿದ್ದೇವೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಭವಿಷ್ಯ ನುಡಿದಿದ್ದಾರೆ.