ನವದೆಹಲಿ[ಮೇ.23]: ಕೇವಲ 7 ಲೋಕಸಭಾ ಕ್ಷೇತ್ರಗಳನ್ನು ಒಡಲಲ್ಲಿಟ್ಟುಕೊಂಡಿರುವ ದೆಹಲಿ, ಮುಂದಿನ ಪ್ರಧಾನಿ ಯಾರಾಗಬೇಕು? ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ನಿರ್ಧರಿಸುವ ಕ್ಷಮತೆ ಹೊಂದಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಗೆದ್ದ ಪಕ್ಷಗಳೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದೆ ಎಂಬುವುದಕ್ಕೆ ಈ ಹಿಂದಿನ ಫಲಿತಾಂಶಗಳೇ ಸಾಕ್ಷಿ. ಹೀಗಿರುವಾಗ ಈ ಬಾರಿಯೂ ಜನಸಾಮಾನ್ಯರ ಕಣ್ಣು ದೆಹಲಿ ಗದ್ದುಗೆ ಯಾರ ಪಾಲಾಗುತ್ತದೆ ಎಂಬುವುದನ್ನು ಕಾಯುತ್ತಿದ್ದಾರೆ.

ಆರಂಭಿಕ ಟ್ರೆಂಡ್ ಗಮನಿಸಿದರೆ ಇಲ್ಲಿನ ಏಳೂ ಕ್ಷೇತ್ರಗಳಲ್ಲೂ NDA ಮುನ್ನಡೆ ಕಾಯ್ದುಕೊಂಡಿದೆ. ಆಪ್ ಹಾಗೂ ಕಾಂಗ್ರೆಸ್ ಪಕ್ಷಗಳು ಇಲ್ಲಿ ತೀವ್ರ ಪೈಪೋಟಿ ನೀಡಿದ್ದವು ಎಂಬುವುದು ಗಮನಾರ್ಹ. ಇದು ಆರಂಭಿಕ ಟ್ರೆಂಡ್ ಆಗಿದ್ದು, ಅಂತಿಮ ಫಲಿತಾಂಶ ಹೇಗಿರುತ್ತದೆ ಎಂಬುವುದನ್ನು ಕಾದು ನೊಡಬೇಕಷ್ಟೇ.

7 ಕ್ಷೇತ್ರ ಒಡಲಲ್ಲಿ: ಪ್ರಧಾನಿ ಯಾರೆಂದು ನಿರ್ಧರಿಸಲಿದೆ ದೆಹಲಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.27 ಕೋಟಿ ಮತದಾರರಿದ್ದು, 7 ಲೋಕಸಭೆ ಕ್ಷೇತ್ರಗಳಿವೆ. ಕಳೆದ  ಚುನಾವಣೆಯಲ್ಲಿ ಎಲ್ಲಾ 7 ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. AAP, ಕಾಂಗ್ರೆಸ್ ಇತರ ಪ್ರಮುಖ ಪಕ್ಷಗಳು. ಒಟ್ಟು 44 ಪಕ್ಷಗಳು, 150 ಅಭ್ಯರ್ಥಿಗಳು ಕಣದಲ್ಲಿದ್ದರು.