ಬೆಂಗಳೂರು(ಮಾ. 30)  ಕರ್ನಾಟಕ ಈ ಬಾರಿ ಹೊಸ ರಾಜಕಾರಣದ ವ್ಯವಸ್ಥೆಗೆ ಕಾರಣವಾಗಿದೆ. ಹಳೆ ಮೈಸೂರು ಭಾಗದಲ್ಲಿ ಬದ್ಧ ವೈರಿಗಳಾಗಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಚುನಾವಣೆಗೆ ಹೋಗುತ್ತಿವೆ.

ಸಹಜವಾಗಿಯೇ ಈ ಕುತೂಹಲ ಇದ್ದು ರಾರು ಎಷ್ಟು ಸ್ಥಾನ ಗೆಲ್ಲುತ್ತಾರೆ ಎಂಬುದು ಮುಖ್ಯವಾಗುತ್ತದೆ.  ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿರುವ ವಿಡಿಪಿ ಅಸೋಸಿಯೇಟ್ಸ್ ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನ ಗಳಿಸಿದರೆ ಕಾಂಗ್ರೆಸ್ 8 ಮತ್ತು ಜೆಡಿಎಸ್ 2 ಸ್ಥಾನ ಗಳಿಸಲಿವೆ ಎಂದು ಹೇಳಿದೆ. 

ನಿಖಿಲ್ ಎಲ್ಲಿದ್ದೀಯಪ್ಪ?, ಬ್ಯಾಲೆಟ್ ಶೀಟ್‌ನಲ್ಲಿ ‘ಫಸ್ಟ್’ ಇದ್ದೀನಪ್ಪ: ಮಂಡ್ಯ ಗೊಂದಲ!

ಈ ಸರ್ವೆ ನಿಜವಾದರೆ ಬಿಜೆಪಿ ತನ್ನ ಬಳಿ ಇರುವ 16ಕ್ಕೆ ಹೆಚ್ಚುವರಿ ಒಂದನ್ನು ಸೇರ್ಪಡೆ ಮಾಡಿಕೊಳ್ಳಲಿದೆ. ಜೆಡಿಎಸ್ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದೆ.
ಬಿಜೆಪಿ ತನ್ನ ಬಳಿ ಇದ್ದ ಹದಿನಾರಕ್ಕೆ  ಒಂದು  ಹೆಚ್ಚುವರಿ ಸ್ಥಾನ ಪಡೆದುಕೊಳ್ಳಲಿದೆ. ಕಾಂಗ್ರೆಸ್ ಗೆ ಉಪಚುನಾವಣೆಯಲ್ಲಿ ಸಿಕ್ಕಿದ್ದ ಒಂದು ಸ್ಥಾನ ಕೈತಪ್ಪಲಿದೆ.