ತುಮಕೂರು(ಮಾ.20) ದೇವೇಗೌಡರ ಗರಡಿಯಲ್ಲಿ ನಾನು ಬೆಳೆದಿದ್ದೇನೆ. ದೇವೇಗೌಡರ ಒಂದು ಮುಖವನ್ನು ನೀವು ನೋಡಿದ್ದೀರಾ. ಅವರ ನಾಲ್ಕಾರು ಮುಖಗಳನ್ನು ನಾನು ನೋಡಿದ್ದೇನೆ ಎಂದು ಬಿಜೆಪಿ ಶಾಸಕ ವಿ. ಸೋಮಣ್ಣ ಹೇಳಿದ್ದಾರೆ.

ಯಾರು ಯಾರನ್ನು ಸೋಲ್ತಾರೆ. ಯಾರು ಯಾರನ್ನು ಗೆಲ್ತಾರೆ.‌ ಸುನಾಮಿಯನ್ನು ಯಾರು ಕಟ್ಟಿ ಹಾಕುತ್ತಾರೆ. ರಾಷ್ಟ್ರದಲ್ಲಿ ಸುಭದ್ರ ಸರ್ಕಾರ ಯಾರಿಂದ ಆಗುತ್ತೆ. ಅನ್ನೋದನ್ನು ಈಗಾಗ್ಲೇ ದೇವೇಗೌಡರು ತಿಳಿದುಕೊಂಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಯಾವ ರೀತಿ ನಡೆದುಕೊಳ್ತಿದ್ದಾರೆ ಎಲ್ಲವೂ ಜನರಿಗೆ ಗೊತ್ತಿದೆ ಎಂದರು.

ದೇವೇಗೌಡರ ಕ್ಷೇತ್ರ ಫೈನಲ್ : ರೇವಣ್ಣರಿಂದ ಶುಭಗಳಿಗೆ ನಿಗದಿ

ಎಲ್ಲದಕ್ಕಿಂತ ಮಿಗಿಲಾಗಿದದ್ದು ರಾಷ್ಟ್ರದ ಜನ.‌ ಜನರ ತೀರ್ಮಾನ ಏನೆಂದು ತಾವೇ ನೋಡ್ತಿರಾ. ಅಪವಿತ್ರ ಮೈತ್ರಿ ಯಾವ ಮಟ್ಟಕ್ಕೆ ಬರುತ್ತದೆ ಎನ್ನುವುದನ್ನು 18ರೊಳಗೆ ಕಾದು ನೋಡಿ. ದೇವೇಗೌಡರು 86 ಕಳೆದು 87ಕ್ಕೆ ಹೋಗುತ್ತಿದ್ದೇನೆ ನಮ್ಮ ಅವಶ್ಯಕತೆ ಎಷ್ಟರ ಮಟ್ಟಿಗೆ ಇದೆ ಎಂದು ಅವರೇ ಹೇಳಿದ್ದಾರೆ . ರಾಜ್ಯದಲ್ಲಿ ಎಚ್ಡಿಡಿಯನ್ನು ಬಿಟ್ಟು ಬೇರೆ ಮಾಜಿ ಪ್ರಧಾನಿಗಳನ್ನು ನೋಡೋಕ್ಕೆ ಆಗಲ್ಲ. ಅವರು ಆಶೀರ್ವಾದ ಮಾಡಿಕೊಂಡು ಇರಬಹುದು ಎಂದರು.

ಮೊಮ್ಮಕ್ಕಳನ್ನು ಗೆಲ್ಲಿಸಿಕೊಂಡು, ರಾಷ್ಟ್ರ ರಾಜಕಾರಣದಲ್ಲಿ ರಾಜ್ಯಕ್ಕೆ ಏನೆಲ್ಲಾ ಕೊಡಬಹುದು ಅನ್ನುವ ಸಲಹೆ ನೀಡಬಹುದು. ವಯಸ್ಸಿನ ಬಗ್ಗೆ ಮಾತನಾಡಿರುವುದರಿಂದ ಅವರ ಸ್ಪರ್ಧೆ ಬಗ್ಗೆ ನನಗೆ ನಂಬಿಕೆಯಿಲ್ಲ ಒಂದು ವೇಳೆ ನಿಂತರೆ ಅವರ ಸ್ಪರ್ಧೆಗೆ ನಾವ್ಯಾರು ಣೆಗಾರರಲ್ಲ.ಗೆಲುವುಸೋಲು ಜನರಿಗೆ ಬಿಟ್ಟ ತೀರ್ಮಾನ ಎಂದು ಸೋಮಣ್ಣ ಹೇಳಿದರು.