ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇನ್ನಾದರೂ ಕೂಡ ಜೆಡಿಎಸ್ ಮುಖಂಡ ದೇವೇಗೌಡರ ಸ್ಪರ್ಧೆ ಕ್ಷೇತ್ರದ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ತುಮಕೂರಿನಿಂದಲೇ ಗೌಡರು ಸ್ಪರ್ಧೆ ಮಾಡಲು ತಯಾರಿ ನಡೆದಿದೆ ಎನ್ನಲಾಗಿದೆ. 

ನಾಮಪತ್ರ ಸಲ್ಲಿಕೆಗೆ ದಿನಾಂಕ, ಶುಭ ಸಮಯವನ್ನು ಸಚಿವ ರೇವಣ್ಣ ಜ್ಯೋತಿಷಿಗಳ ಬಳಿ ಕೇಳಿ ನಿಗದಿ ಮಾಡುತ್ತಿದ್ದಾರೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಪ್ರಸಾದ್ ಖಚಿತ ಮಾಹಿತಿ ನೀಡುತ್ತಿದ್ದಾರೆ. 

ದೇವೇಗೌಡರ ತುಮಕೂರು ಸ್ಪರ್ಧೆಗೆ ಅಲ್ಲಿನ ಕಾಂಗ್ರೆಸ್ ಮುಖಂಡರು ವೈಯಕ್ತಿಕ ವಿಚಾರವನ್ನಿರಿಸಿಕೊಂಡು ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತುಮಕೂರಿನಲ್ಲಿ ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. 

ಇನ್ನು ಇದೇ ವೇಳೆ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಜಿ.ಎಸ್.ಬಸವರಾಜು ವಿರುದ್ದ ಹರಿಹಾಯ್ದಿದ್ದು, ಆತ ಓರ್ವ ತಲೆ ಕೆಟ್ಟ ಮನುಷ್ಯ, ವಯಸ್ಸಾದ ಮೇಲೆ ಅವರಿಗೆ ಅರುಳು ಮರುಳಾಗಿದೆ ಎಂದರು. 

ವಯಸ್ಸಿಗೆ ತಕ್ಕ ಘನೆತಯಂತೆ ಮಾತನಾಡಬೇಕು. ಬಿಜೆಪಿ ಬಸವರಾಜು ಶನಿ ಇದ್ದಂತೆ. ಇವರಿಂದಲೇ ಜಿಲ್ಲೆಯಲ್ಲಿ ಬಿಜೆಪಿ ಸರ್ವನಾಶ ಆಗಲಿದೆ ಎಂದರು. 

ಇನ್ನು ಕಳೆದ ಚುನಾವಣೆ ವೇಳೆ ನಿಧನರಾದ ಕೃಷ್ಣಪ್ಪ ಸಾವಿಗೆ ಜೆಡಿಎಸ್ ಮುಖಂಡರೇ ಕಾರಣ ಎಂಬ ಬಸವರಾಜು ಹೇಳಿಕೆ ವಿರುದ್ಧ ಹರಿಹಾಯ್ದರು. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ