ತುಮಕೂರ[ಮಾ. 20]  ಸಹೋದರನ ಡಿಕೆ ಸುರೇಶ್ ಗೆಲುವಿಗೆ ಡಿಕೆ ಶಿವಕುಮಾರ್ ಕಸರತ್ತು ಆರಂಭಿಸಿದ್ದಾರೆ. ಜೆಡಿಎಸ್ ಮಾಜಿ ಶಾಸಕ ಡಿ. ನಾಗರಾಜಯ್ಯನನ್ನು ಭೇಟಿ ಮಾಡಿ ಡಿಕೆಶಿ ಮಾತುಕತೆ ನಡೆಸಿದ್ದಾರೆ. 

ಹಾಲಿ ಕಾಂಗ್ರೆಸ್  ಶಾಸಕ ಡಾ.ರಂಗನಾಥ್   ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದೇ ಕಾರಣದಿಂದ ಸಂಸದ ಡಿ.ಕೆ ಸುರೇಶ್ ಸ್ಪರ್ಧೆಗೆ ವಿರೋಧ ವ್ಯಕ್ತ ಪಡಿಸಿದ್ದ ಡಿ.ನಾಗರಾಜಯ್ಯ ತಾವೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಸ್ವತಂತ್ರ  ಸ್ಪರ್ಧಿಸುತ್ತೇನೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದಿದ್ದು ಡಿಕೆಶಿಯವರ ಭೇಟಿಗೆ ಕಾರಣ ಎನ್ನಲಾಗಿದೆ.

ಯಾರಾಗ್ತಾರೆ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ? ದೆಹಲಿ ಪಟ್ಟಿಯಲ್ಲಿ ಹೊಸ ಹೆಸರು

ದೋಸ್ತಿಗಳ ಹೊಂದಾಣಿಕೆಯ ಸ್ಪರ್ಧೆಗೆ ಕುಣಿಗಲ್ ನಲ್ಲಿ ವಿರೋಧ ವ್ಯಕ್ತವಾಗಿದ್ದಕ್ಕೆ ಡಿಕೆಶಿ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗೆ ಬೆಂಬಲ ನೀಡಲು ಡಿ. ನಾಗರಾಜಯ್ಯ ಹಿಂದೇಟು ಹಾಕಿದ್ದಾರೆ. ದೇವೇಗೌಡರ ಕುಟುಂಬದೊಂದಿಗೆ ಆಪ್ತವಾಗಿರುವ ಡಿ. ನಾಗರಾಜಯ್ಯ ಅವರನ್ನು ಡಿಕೆಶಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.