ಬೆಂಗಳೂರು[ಮಾ. 20]  ದಿಢೀರ್ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ನ ದಕ್ಷಿಣ ಕನ್ನಡ ಟಿಕೆಟ್ ಆಕಾಂಕ್ಷಿಗಳನ್ನು ದೆಹಲಿಗೆ ಹೈಕಮಾಂಡ್ ಕರೆಸಿಕೊಂಡಿದೆ. ಗುರುವಾರ ದೆಹಲಿಯಲ್ಲಿ ಇವರನ್ನೊಳಗೊಂಡ ಮಹತ್ವದ ಸಭೆ ನಡೆಯಲಿದೆ ಎಂದು ಹೇಳಲಾಗಿದೆ.

ಆಕಾಂಕ್ಷಿಗಳಾದ ರಮಾನಾಥ ರೈ, ರಾಜೇಂದ್ರ ಕುಮಾರ್,  ಐವನ್ ಡಿಸೋಜ, ವಿನಯ ಕುಮಾರ್ ಸೊರಕೆ, ಮಿಥುನ್ ರೈ, ಕಣಚೂರು ಮೋನು, ಮೊಹಿಯುದ್ದೀನ್ ಬಾವ, ಮಮತಾ ಗಟ್ಟಿ, ಶಕುಂತಳಾ ಶೆಟ್ಟಿ ಹಾಗೂ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಈ ಬುಲಾವ್ ಬಂದಿದ್ದು ದೆಹಲಿಗೆ ದೌಡಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಅಭ್ಯರ್ಥಿ ಆಯ್ಕೆಯ ಸೆಂಟ್ರಲ್ ಎಲೆಕ್ಷನ್ ಸಮಿತಿ ಸಭೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಾ.22ಕ್ಕೆ ನಡೆಯಲಿದೆ. ಅದಕ್ಕಿಂತ ಮುಂಚಿತವಾಗಿ ಆಕಾಂಕ್ಷಿಗಳನ್ನು ಕರೆಸಿರುವುದು ಕುತೂಹಲ ಕೆರಳಿಸಿದೆ.