ಬೆಂಗಳೂರು, [ಮಾ.15]: ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 17 ಕ್ಷೇತ್ರಗಳನ್ನ ಗೆದ್ದಿದ್ದ ಬಿಜೆಪಿ ಈ ಬಾರಿ ಅನೇಕ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. 

28ರ ಪೈಕಿ 22 ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ರಾಜ್ಯ ಬಿಜೆಪಿ ಪಣತೊಟ್ಟಿದೆ. ಆದ್ರೆ, ಕೆಲ ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿ ಕೊರತೆ ಅನುಭವಿಸುತ್ತಿದೆ.  ಇದ್ರಿಂದ ನಾಮಪತ್ರ ಸಲ್ಲಿಕೆಯ ದಿನ ಹತ್ತಿರ ಬರುತ್ತಿರುವಂತೆಯೇ ಬಿಜೆಪಿ ಪಾಳಯದಲ್ಲಿ ಆತಂಕ ಮನೆ ಮಾಡುತ್ತಿದೆ. 

ಮೋದಿ ಅಲೆಯನ್ನು ಉಪಯೋಗಿಸಿಕೊಳ್ಳುವ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದೆ. ಇನ್ನು ಬೇರೆ ಪಕ್ಷದಿಂದ ವಲಸೆ ಬರುವ ನಾಯಕರಿಗೆ ಕಾದು ಕುಳಿತಿದೆ. ಹಾಗಾದ್ರೆ ಕ್ಯಾಂಡಿಡೇಟ್ ಕೊರತೆ ಇರುವ ಕ್ಷೇತ್ರಗಳಾವುವು ಇಲ್ಲಿದೆ ನೋಡಿ.

"

"