ಲಕ್ನೋ[ಏ.13]: ಉತ್ತರ ಪ್ರದೇಶದ ಲಖನೌ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಸ್ಪರ್ಧಿಯಾಗಿದ್ದಾರೆ!

ಅರೇ ಇದು ಹೇಗೆ ಸಾಧ್ಯ ಮೋದಿ ರಾಜನಾಥ್‌ ಹಾಗೂ ಮೋದಿ ಒಂದೇ ಪಕ್ಷದವರಲ್ಲವೇ ಎಂದು ಅಚ್ಚರಿಪಡಿಬೇಡಿ. ರಾಜನಾಥ್‌ ವಿರುದ್ಧ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿಯ ಹೆಸರು ಅಭಿನಂದನ್‌ ಪಾಠಕ್‌. ಇವರು ನೋಡಲು ಪಕ್ಕಾ ಮೋದಿಯಂತೆಯೇ ಕಾಣುವ ಕಾರಣದಿಂದ ಸುದ್ದಿಯಾಗಿದ್ದಾರೆ.

ಸದ್ಯ ಲಕ್ನೋ ಕ್ಷೇತ್ರದಲ್ಲಿ ಏರ್ಪಟ್ಟಿರುವ 'ಮೋದಿ' ಹಾಗೂ ರಾಜನಾಥ್ ಸಿಂಗ್ ನಡುವಿನಪೈಪೋಟಿ ಭಾರೀ ಕುತೂಹಲ ಕೆರಳಿಸಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.