ನವದೆಹಲಿ[ಮೇ. 06]  ಏಳು ರಾಜ್ಯಗಳ 51 ಕ್ಷೇತ್ರಗಳಿಗೆ ಸೋಮವಾರ ನಡೆದ ಐದನೇ ಹಂತದ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು ಶೇ. 62.56 ರಷ್ಟು ಮತದಾನವಾಗಿದೆ.

ಉತ್ತರಪ್ರದೇಶ(14), ರಾಜಸ್ಥಾನ(12), ಪಶ್ಚಿಮ ಬಂಗಾಳ(7), ಮಧ್ಯಪ್ರದೇಶ (7), ಬಿಹಾರ(5), ಜಾರ್ಖಂಡ್(4) ಹಾಗೂ ಜಮ್ಮು-ಕಾಶ್ಮೀರದಲ್ಲಿ ಲಡಾಖ್, ಅನಂತ್​ನಾಗ್ ಲೋಕಸಭಾ ಕ್ಷೇತ್ರಗಳಿಗೆ ಇಂದು  ಮತದಾನ ನಡೆದಿದೆ.   51 ಕ್ಷೇತ್ರಗಳ ಮತದಾನದ ಪ್ರಮಾಣ ಲಭ್ಯವಾಗಿದೆ.

‘ಇದೇನಿದು ಸುಮಲತಾಗೆ ಕೇಂದ್ರದಲ್ಲಿ ಸುಮಲತಾಗೆ ಮಂತ್ರಿ ಪಟ್ಟ’

ನಾಲ್ಕನೇ ಹಂತದ ಚುನಾವಣೆ ವೇಳೆ ಪಶ್ವಿಮ ಬಂಗಾಳದಲ್ಲಿ ಉಂಟಾಗಿದ್ದ ಹಿಂಸಾತ್ಮಕ ಘಟನೆಗಳು ಈ ಸಾರಿಯೂ ಮುಂದುವರಿದವು ಆದರೆ ಮತದಾನದ ಪ್ರಮಾಣದಲ್ಲಿ ಹಿನ್ನಡೆಯಾಗಲಿಲ್ಲ. ಸೋನಿಯಾ ಗಾಂಧಿ(ರಾಯ್​ ಬರೇಲಿ), ರಾಹುಲ್​ ಗಾಂಧಿ ಹಾಗೂ ಸ್ಮೃತಿ ಇರಾನಿ(ಅಮೇಠಿ), ರಾಜನಾಥ್​ ಸಿಂಗ್​(ಲಖನೌ) ಹಾಗೂ ರಾಜ್ಯವರ್ಧನ್​ ಸಿಂಗ್​ ರಾಠೋಡ್​( ಜೈಪುರ ಗ್ರಾಮೀಣ)  ಕ್ಷೇತ್ರಕ್ಕೆ ಮತದಾನ ನಡೆದಿದೆ.

ರಾಜ್ಯವಾರು ಲೆಕ್ಕಾಚಾರ[ಸಂಜೆ 6 ಗಂಟೆ ವೇಳೆಗೆ]

ಬಿಹಾರ- ಶೇ. 56.79

ಮಧ್ಯ ಪ್ರದೇಶ- 62.96

ಜಮ್ಮು ಮತ್ತು ಕಾಶ್ಮೀರ- ಶೇ. 17.07

ರಾಜಸ್ಥಾನ-  ಶೇ. 63.03

ಉತ್ತರ ಪ್ರದೇಶ- ಶೇ. 53.32

ಪಶ್ಚಿಮ ಬಂಗಾಳ- ಶೇ. 74.06

ಜಾರ್ಖಂಡ್- ಶೇ. 63.99