ಮಲ್ಪೆ[ಮಾ. 17]   ಕಾಂಗ್ರೆಸ್ ಪಕ್ಷ ಮತ್ತು ನಾಯಕರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡುತ್ತಾ, ವಾಟ್ಸಾಪ್ ನಲ್ಲಿ ವಿಪರೀತ ಟ್ರೋಲ್ ಗೆ ಕಾರಣವಾಗಿದ್ದ ಇಲ್ಲಿನ ವಾಸು ಎಂಬವರನ್ನು ಉಡುಪಿ ಸೆನ್ ಠಾಣೆಯ ಪೊಲೀಸರು ಕರೆ ಎಚ್ಚರಿಕೆ ನೀಡಿದ್ದಾರೆ.

ಮಲ್ಪೆ ಪರಿಸರದಲ್ಲಿ ತಿರುಗಾಡುವ ವಾಸು ಮೋದಿ ಅಭಿಮಾನಿ. ಸ್ವತಃ ಅವರಲ್ಲಿ ಮೊಬೈಲ್ ಇಲ್ಲ. ಆದರೇ ಯಾರಾದರೂ ಅವರ ಎದುರು ಮೊಬೈಲ್ ಹಿಡಿದರೆ  ಹಿಗ್ಗಾಮುಗ್ಗಾ ಮಾತನಾಡುತ್ತಾರೆ.

ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಅವರ ಬಾಯಲ್ಲಿ ಮೋದಿಯ ಪರವಾಗಿ, ಆದರೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಮ್ಯಾ, ಆಸ್ಕರ್ ಫೆರ್ನಾಂಡಿಸ್ ಅವರ ವಿರುದ್ಧ ಅವಾಚ್ಯವಾಗಿ ಬೈಯ್ಯುವಂತೆ ಹೇಳಿಸಿ, ಅದನ್ನು ವಿಡಿಯೋ ಮಾಡಿ ವಾಟ್ಸಾಪ್ ಗೆ ಹರಿಯಬಿಟ್ಟಿದ್ದಾರೆ. ಇದರಿಂದ ವಾಸು ಅವರು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದ್ದರು.

‘RSS ದೇವೇಗೌಡರನ್ನು ಬೆಂಬಲಿಸುತ್ತಾ? ಪ್ರಕಾಶ್ ರೈಗೆ ಕಾಂಗ್ರೆಸ್ ಕೂಡಾ ಕ್ಯಾನ್ಸರ್!’

ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಭಾನುವಾರ ಸೆನ್ ಪೊಲೀಸರು ವಾಸುವನ್ನು ಠಾಣೆಗೆ ಕರೆಯಿಸಿ ವಿಚಾರಿಸಿದ್ದಾರೆ. ಅವರು ತನ್ನಿಂದ ಇಷ್ಟೆಲ್ಲಾ ರಗಳೆ ಆಗಿರುವ ವಿಷಯ ತಿಳಿದಿರಲಿಲ್ಲ. ಆತ ಕಿಡಿಗೇಡಿಗಳು ನೀಡುವ ಹಣ ಮತ್ತು ಮದ್ಯದ ಆಸೆಗೆ ಹೀಗೆಲ್ಲಾ ಮಾತನಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮುಂದೆ ಹೀಗೆಲ್ಲಾ ಮೊಬೈಲ್ ವಿಡಿಯೋ ಮುಂದೆ ಮಾತನಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಈ ಬಗ್ಗೆ ಮಲ್ಪೆ ವಾಸು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದಂತೆ, ಕೆಲವರು ಮುಗ್ಧ ವಾಸು ಅವರಿಂದ ಇಂತಹ ಕೃತ್ಯ ಮಾಡಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೇ, ಆತನನ್ನು ವಿಚಾರಣೆ ನಡೆಸಿದ ಪೊಲೀಸರ ವಿರುದ್ಧವೂ ಟೀಕೆ ವ್ಯಕ್ತವಾಗಿದೆ.