ಉಡುಪಿ [ಮಾ.17]  ಹಿಂದೂ ಧರ್ಮ ಉಳಿದದ್ದು ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯರಿಂದಲ್ಲ. ದೇವೇಗೌಡರಷ್ಟು ದೊಡ್ಡ ಹಿಂದು ಯಾರಿದ್ದಾರೆ? ಅವರನ್ನು ಆರ್ ಎಸ್ ಎಸ್ ಬೆಂಬಲಿಸುತ್ತಾ? ಹೀಗೆ ಪ್ರಶ್ನೆ ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು.

ಬೆಂಗಳೂರು ಸೆಂಟ್ರಲ್ ನಿಂದ ಲೋಕ ಕಣಕ್ಕೆ ಧುಮಕಲಿರುವ  ಪ್ರಕಾಶ್ ರೈ ವಿರುದ್ದ ಮಟ್ಟು ಗರಂ ಆಗಿದ್ದಾರೆ. ಪ್ರಕಾಶ ರೈ ಗೆ ಈಗ ಕಾಂಗ್ರೆಸ್ ಕೂಡಾ ಕ್ಯಾನ್ಸರ್ ಥರ ಕಾಣ್ಸುತ್ತೆ. ಆರು ತಿಂಗಳ ಹಿಂದೆ ಬಿಜೆಪಿ ಕ್ಯಾನ್ಸರ್ ಅಂದಿದ್ರು. ಕಾಂಗ್ರೆಸ್ ಕೆಮ್ಮು ಜ್ವರ ಅಂದ್ರು. ಕ್ಯಾನ್ಸರ್ ವಿರುದ್ಧ ನನ್ನ ಹೋರಾಟ ಅಂದಿದ್ದರು.  ಈಗ ಮತ ವಿಭಜನೆಗೆ ಹೊರಟಿದ್ದಾರೆ, ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರಿಗೆ ಸೋಲುಣಿಸಿದ್ದ ಆ ‘9’ ಮತ್ತೆ ಬಂತು!

ಕೃಷ್ಣ ಮಠದಲ್ಲೂ ರಾಜಕೀಯ ಇದೆ. ಪೇಜಾವರ ಸ್ವಾಮಿಗಳು ಹಿಂದು ಯಾರು ಅಂತ ಹೇಳಬೇಕು. ಹಿಂದೂಗಳ ಪರ ಅಂತ ಧರ್ಮ ದ್ರೋಹ ಮಾಡ್ಬೇಡಿ ಎಂದು ಹೇಳಿದ್ದಾರೆ.