ಕಲಬುರಗಿ[ಮಾ. 18]   ಮೈತ್ರಿ ಪಕ್ಷಗಳ ಟಿಕೆಟ್ ಹಂಚಿಕೆಯಿಂದ ಕೈ ನಾಯಕರು ಅಸಮಾಧಾನಗೊಂಡಿರುವ ಬಗ್ಗೆ  ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ.

ಕಲಬುರಗಿ ಏರ್ ಪೋರ್ಟ್ ನಲ್ಲಿ ಮಾತನಾಡಿ, ಪ್ರಸೆಂಟ್ ಎಂಪಿ ಇರುವ ಕ್ಷೇತ್ರಗಳನ್ನ ಬಿಟ್ಟು ಕೊಡುವಂತೆ ನಮ್ಮ ವಾದವಿದೆ.  ಇನ್ನೂ ಪ್ರಯತ್ನ ಮಾಡುತ್ತಿದ್ದೇವೆ,. ದೇವೇಗೌಡರ ಜೊತೆ ಮಾತನಾಡಿದ್ದೇನೆ. ದೇವೇಗೌಡರ ಮನವೊಲಿಸುವಂತ ಪ್ರಯತ್ನ ನಡೆದಿದೆ, ಸಿಎಂ ಕುಮಾರಸ್ವಾಮಿ ಅವರಿಗೂ ಕೇಳಿದ್ದೇವೆ. ಅಂತಿಮವಾಗಿ ಎಲ್ಲರೂ ಕೂಡಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. 

ಮಂಡ್ಯಕ್ಕೆ ಫಿಲ್ಮ್ ಸ್ಟಾರ್ಸ್, ಫೇಸ್ಬುಕ್‌ನಲ್ಲಿ JDS ಫುಲ್ ವಾರ್..!

ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಕ್ಷೇತ್ರಗಳ ಪೈಕಿ ತುಮಕೂರಿನಲ್ಲಿ ಕಾಂಗ್ರೆಸ್ ನ ಮುದ್ದಹನುಮೇಗೌಡ ಎಂಪಿಯಾಗಿದ್ದಾರೆ. ಆದರೆ ಕ್ಷೇತ್ರವನ್ನು ಹೊಂದಾಣಿಕೆಯಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ.