ಶಿವಮೊಗ್ಗ : ಹಿರಿಯರ ಆಶಿರ್ವಾದ ಪಡೆದುಕೊಳ್ಳಲು ಭಾಗ್ಯವರಿಬೇಕು. ಬಿ.ವೈ.  ಆಶೀರ್ವಾದ ಪಡೆಯಲು ಭಾಗ್ಯಬೇಕು, ಬಿ. ವೈ ರಾಘವೇಂದ್ರರಿಗೆ ಆ ಭಾಗ್ಯವಿಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದರು. 

ಶಿವಮೊಗ್ಗದಲ್ಲಿ ಮಾತನಾಡಿದ ಶಿವಕುಮಾರ್ ತಂದೆಯ ಆಶೀರ್ವಾದ ಪಡೆಯದೆ ನಾಮಪತ್ರ ಸಲ್ಲಿಸಿರುವುದು ಅಶುಭ ಸೂಚನೆ.  ಇದೇ ಸೋಲಿನ ಪ್ರಥಮ ಹೆಜ್ಜೆ ಎಂದರು. 

ಶಿವಮೊಗ್ಗ ಲೋಕಸಭಾ ಚುನಾವಣಾ ಅಭ್ಯರ್ಥಿ ರಾಘವೇಂದ್ರ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಎಸ್.ಎಂ ಕೃಷ್ಣ ಭಾಗಿಯಾಗಬೇಕಿತ್ತು. ಆದರೆ ಹೆಲಿಕಾಪ್ಟರ್ ಸಮಸ್ಯೆಯಿಂದ ಇಲ್ಲಿಗೆ ಬರಲಿಲ್ಲ. 

ತಂತ್ರಜ್ಞಾನ ದೋಷದಿಂದ ಹೆಲಿಕಾಪ್ಟರ್ ಹಾರದೇ, ಗೈರಾದರು. ಇದು ಬಿಜೆಪಿ ಅಭ್ಯರ್ಥಿಯ ಸೋಲಿನ ಮೊದಲ ಹೆಜ್ಜೆಯಾಗಿದ್ದು, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಇದು ಶುಭ ಸೂಚನೆಯಾಗಿದ್ದು, ಗೆಲುವು ಖಚಿತ ಎಂದು ಡಿ.ಕೆ. ಶಿವಕುಮಾರ್ ಚುನಾವಣಾ ಭವಿಷ್ಯ ನುಡಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ