ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ನಾಗಠಾಣಾ ಕ್ಷೇತ್ರದ ಶಾಸಕರ ಪತ್ನಿಗೆ ಜೆಡಿಎಸ್ ಟಿಕೆಟ್ ನೀಡಿದೆ.
ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದ್ದು, ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಅವರ ಪತ್ನಿ ಡಾ. ಸುನೀತಾ ಚವ್ಹಾಣ ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಿಜಯಪುರ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದ್ದ ದಿನದಿಂದಲೇ ಕಾಂಗ್ರೆಸ್ಸಿನ ದಲಿತ ಮುಖಂಡ, ಮಾಜಿ ಶಾಸಕ ರಾಜು ಆಲಗೂರ ಅಸಮಾಧಾನಗೊಂಡಿದ್ದರು.
ಮಾತ್ರವಲ್ಲ, ಕ್ಷೇತ್ರ ವಾಪಸ್ ಪಡೆಯುವಂತೆ ಕಾಂಗ್ರೆಸ್, ಜೆಡಿಎಸ್ ವರಿಷ್ಠರ ಮೇಲೆ ಸಾಕಷ್ಟು ಒತ್ತಡ ಕೂಡ ಹೇರಿದ್ದರು. ಇದರ ನಡುವೆ ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಆ ಪಕ್ಷದ ವರಿಷ್ಠರು ಆಲಗೂರಗೆ ಆಹ್ವಾನ ಕೊಟ್ಟಿದ್ದರು. ಆದರೆ, ಈ ಆಹ್ವಾನವನ್ನು ಆಲಗೂರು ತಿರಸ್ಕರಿಸಿದ್ದರು ಎನ್ನಲಾಗಿದೆ. ಈ ನಡುವೆ ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ ಆನಂದ ಅಸ್ನೋಟಿಕರ್ ಅವರಿಗೆ ದೊರೆತಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
