ಬೆಂಗಳೂರು[ಮಾ. 12]  ಜೆಡಿಎಸ್ ಗೆ ವಿಜಯಪುರ, ಬೆಂಗಳೂರು ಉತ್ತರ, ಹಾಸನ, ಮಂಡ್ಯ, ಶಿವಮೊಗ್ಗ ಕ್ಷೇತ್ರಗಳು ಲೋಕ ಸಮರಕ್ಕೆ ಸಿಗಲಿದೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್ ವಿ ದತ್ತಾ ಹೇಳಿದ್ದಾರೆ.

ಈಗ ತೀರ್ಮಾನ ಆಗಬೇಕಾಗಿರೋದು ಮೈಸೂರು ಕ್ಷೇತ್ರ. ಮೈಸೂರು ಕ್ಷೇತ್ರ ಜೆಡಿಎಸ್ ಗೆ ಕಾಂಗ್ರೆಸ್ ಬಿಟ್ಟುಕೊಟ್ಟರೇ ದೇವೇಗೌಡರು ಏಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋದು ಖಚಿತವಾಗುತ್ತದೆ. ಅಲ್ಲಿಯವರೆಗೆ ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಕೆಪಿಸಿಸಿ ಪಟ್ಟಿಗೂ ಮುನ್ನವೇ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಮೈಸೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಡದಿರಲು ಸಿದ್ದರಾಮಯ್ಯ ಒತ್ತಡ ಸಹಜ. ಅದು ಅವರ ಹೃದಯಕ್ಕೆ ಹತ್ತಿರವಾದ ಕ್ಷೇತ್ರವಲ್ಲವೇ..? ಮೈಸೂರು ಬದಲು ಉಡುಪಿ, ಅಥವಾ ಉತ್ತರ ಕನ್ನಡ ತಗೊಳಿ ಅಂತ ಕಾಂಗ್ರೆಸ್ ನವರು ಹೇಳ್ತಿದ್ದಾರೆ. ಆದ್ರೆ ನಮಗೆ ಅಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಒಂದು ವೇಳೆ ಮೈಸೂರು ಕಾಂಗ್ರೆಸ್ ಉಳಿಸಿಕೊಂಡರೆ ನಾವು ತುಮಕೂರು ಕೇಳ್ತೇವೆ. ಮೈಸೂರು ಕಾಂಗ್ರೆಸ್ ಗೆ ಹೇಗೆ ಹೃದಯಕ್ಕೆ ಹತ್ತಿರವೋ, ನಮಗೆ ತುಮಕೂರು ಹೃದಯಕ್ಕೆ ಹತ್ತಿರವಾದ ಕ್ಷೇತ್ರ ಎಂದು ದತ್ತಾ ಹೇಳಿದರು.