ಕೊಪ್ಪಳ[ಮಾ. 12]  ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವರಾಜ ತಂಗಡಗಿ ಆಯ್ಕೆಯಾಗಿದ್ದಾರೆ! ಕಾಂಗ್ರೆಸ್ ಇಲ್ಲಿಯವರೆಗೆ ಯಾವುದೆ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಹೊರ ಹಾಕದೆ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ತಂಗಡಗಿ ಅಭಿಮಾನಿಗಳು ಅಭ್ಯರ್ಥಿಯ ಅಧಿಕೃತ ಘೋಷಣೆ ಮಾಡಿದ್ದಾರೆ!

ಸಿದ್ದಾಪುರ ಜಿಲ್ಲಾ ಕಾಂಗ್ರೆಸ್ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ಅಭಿಮಾನಿಗಳು ತಂಗಡಗಿಗೆ ಜೈ ಎಂದಿದ್ದಾರೆ. ಈ ಪೋಸ್ಟ್ ಸಹಜವಾಗಿಯೇ ಜಿಲ್ಲಾ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದೆ.

ಮಂಡ್ಯ ಕಣದಿಂದ ಸುಮಲತಾ ಹಿಂದೆ ಸರಿತಾರೆ! ಎಲ್ಲಿಂದ ಬಂದ ಸುದ್ದಿ

ಇನ್ನೊಂದು ಕಡೆ ಕಾಂಗ್ರೆಸ್ ಟಿಕೆಟ್ ಗಾಗಿ ಅಪ್ಪ-ಮಗನ ನಡುವೆ ಪೈಪೋಟಿ ಏರ್ಪಟ್ಟಿದೆ.  ಮಾಜಿ ಶಾಸಕ ಬಸವರಾಜ ಹಿಟ್ನಾಳ್- ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ನಡುವೆ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ. ಇದರ ಮದ್ಯೆಯೇ ಶಿವರಾಜ ತಂಗಡಗಿ ಬೆಂಬಲಿಗರು ಜೈಕಾರ ಹಾಕಿದ್ದಾರೆ.