ಲೋಕಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ| ನಾಮಿನೇಷನ್ ಪತ್ರ ಮನೆಯಲ್ಲೇ ಮರೆತು ಬಂದ ಅಭ್ಯರ್ಥಿ!

ಧಾರ​ವಾಡ[ಏ.02]: ಧಾರವಾಡ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಯೊಬ್ಬರು ನಾಮಪತ್ರವನ್ನೇ ಮರೆತು ಚುನಾವಣಾಧಿಕಾರಿಗಳ ಮುಂದೆ ಹೋಗಿ ಪೇಚಿಗೀಡಾದ ಅಪರೂಪದ ಪ್ರಸಂಗ ಸೋಮವಾರ ನಡೆದಿದೆ.

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಮಲ್ಲಿಕಾರ್ಜುನ ಬಾಳನಗೌಡ್ರ ಸೋಮ​ವಾರ ನಾಮಪತ್ರ ಇಲ್ಲದೇ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಚುನಾವಣಾಧಿಕಾರಿ ಬಳಿ ತೆರಳಿದರು. ಹತ್ತಾರು ಜನರ ಮೆರ​ವ​ಣಿ​ಗೆ ಮುಗಿಸಿ, ಕೈ ಬೀಸುತ್ತಾ ಒಳ ಬಂದ ಬಾಳ​ನ​ಗೌ​ಡರಿಗೆ ನಾಮಪತ್ರ ತಂದಿಲ್ಲ ಎಂಬುದೂ ಮರೆತು ಹೋಗಿತ್ತು.

ಚುನಾವಣಾಧಿಕಾರಿಗಳ ಮುಂದೆ ಹೋಗಿ ನಿಂತಾಗಿತ್ತು. ಆಗ ಚುನಾ​ವ​ಣಾ​ಧಿ​ಕಾ​ರಿ​ಗಳು ನಾಮ​ಪತ್ರ ಎಲ್ಲಿ ಎಂದು ಪ್ರಶ್ನಿಸಿದಾಗಲೇ ನಾಮಪತ್ರ ಬಿಟ್ಟು ಬಂದದ್ದು ಅರಿವಾಗಿದೆ. ಆಗ ಎಚ್ಚೆತ್ತು ಸಹ​ಚ​ರ​ನಿಗೆ ನಾಮ​ಪತ್ರ ತರಲು ಹೇಳಿದರು. ಆದರೆ, ಆತ ಬರಲು ತಡ ಮಾಡಿ​ದ್ದ​ರಿಂದ ತಾವೇ ಹೊರ ಹೋಗಿ ನಾಮ​ಪತ್ರ ತಂದು ಕೊನೇ ಕ್ಷಣ​ದಲ್ಲಿ ಸಲ್ಲಿ​ಸಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ