ಮಂಡ್ಯ:  ಶತಾಯ- ಗತಾಯ ತಮ್ಮ ಮಗನನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ತಮ್ಮ ಪುತ್ರ ನಿಖಿಲ್‌ ಗೆಲುವಿಗಾಗಿ ತಂತ್ರಗಾರಿಕೆಯನ್ನು ಚುರುಕುಗೊಳಿಸಿದ್ದು, 2 ದಿನ ಕೆಆರ್‌ಎಸ್‌ನಲ್ಲಿ ವಾಸ್ತವ್ಯ ಹೂಡಿ ರಣತಂತ್ರ ರೂಪಿಸಿದ್ದಾರೆ.

ಮಂಗಳವಾರ ರಾತ್ರಿಯೇ ಮಂಡ್ಯಕ್ಕೆ ಆಗಮಿಸಿದ ಕುಮಾರಸ್ವಾಮಿ, ಕೆಆರ್‌ಎಸ್‌ ಸಮೀಪವಿರುವ ರಾಯಲ್‌ ಆರ್ಕಿಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಮಂಗಳವಾರ ರಾತ್ರಿ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಜಿಲ್ಲೆಯ ಪ್ರಮುಖ ಜೆಡಿಎಸ್‌ ಮುಖಂಡರೊಂದಿಗೆ ಸುದೀರ್ಘ ಮಾತುಕತೆ ನಡೆಸಿ ರಣತಂತ್ರಗಳನ್ನು ರೂಪಿಸಿದ್ದಾರೆ. ಇದಾದ ಬಳಿಕ ಬುಧವಾರ ಬೆಳಗ್ಗೆ 11 ಗಂಟೆಯಿಂದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಜಿ.ಪಂ. ಸದಸ್ಯರೊಂದಿಗೆ ಸತತ 2 ತಾಸು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಚಿವ ಪುಟ್ಟರಾಜು, ಶಾಸಕ ಡಾ.ಕೆ.ಅನ್ನದಾನಿ, ಮೇಲ್ಮನೆ ಸದಸ್ಯ ಅಪ್ಪಾಜಿಗೌಡ ಸಹ ಇದ್ದರು ಎಂದು ತಿಳಿದು ಬಂದಿದೆ.

ನಾನೂ ಭಾವನಾತ್ಮಕವಾಗಿ ಮಾತನಾಡುವೆ:

ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಮೇಲುಕೋಟೆಯತ್ತ ಹೊರಟ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಚುನಾವಣೆ ಸಂದರ್ಭದಲ್ಲಿ ಕೃತಕ ಭಾವನೆಯನ್ನುಂಟು ಮಾಡಲು ಹೊರಟಿದ್ದಾರೆ. ಜನ ಅವರನ್ನು ನಂಬುವುದಿಲ್ಲ. ಅವರೇನು ಎಮೋಷನಲ್‌ ಆಗಿ ಮಾತನಾಡುತ್ತಾರೆ? ಅದಕ್ಕಿಂತಲೂ ಎರಡು ಪಟ್ಟು ಎಮೋಷನಲ್‌ ಆಗಿ ಮಾತನಾಡಲು ನಮಗೂ ಬರುತ್ತದೆ. ಕಣ್ಣೀರು ಹಾಕಿದ ಮಾತ್ರಕ್ಕೆ ಮಂಡ್ಯದ ಜನತೆ ಕರಗಿ ಹೋಗುವುದಿಲ್ಲ ಎಂದು ಪರೋಕ್ಷವಾಗಿ ಸುಮಲತಾ ಅವರಿಗೆ ಟಾಂಗ್‌ ನೀಡಿದರು.

ದರ್ಶನ್‌, ಯಶ್‌ ವಿರುದ್ಧ ತನಿಖೆ ಮಾಡಿಸುವುದಾಗಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಶಾಸಕ ನಾರಾಯಣಗೌಡ ಚಿತ್ರನಟರ ವಿರುದ್ಧ ಹೇಳಿಕೆ ನೀಡಿದ್ದರೂ ನಾವು ಯಾವುದೇ ಕಾರಣಕ್ಕೂ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದಿಲ್ಲ. ಅದು ನಮ್ಮ ಜೀವಮಾನದಲ್ಲಿ ಬಂದಿಲ್ಲ. ಯಾರ ಬಗ್ಗೆಯೂ ಲಘುವಾಗಿ ಮಾತನಾಡ ಬೇಡಿ ಎಂದು ಈಗಾಗಲೇ ನಾರಾಯಣಗೌಡರಿಗೆ ಸೂಚನೆ ಕೊಟ್ಟಿದ್ದೇನೆ. ನನ್ನ ಕಾರ್ಯಕರ್ತರಿಂದಲೇ ನಾನು ಜಯ ಗಳಿಸುತ್ತೇನೆ. ಹೀಗಿರುವಾಗ ಬೇರೆಯವರ ಜೊತೆ ಯಾರೋ ಇದ್ದಾರೆ ಎಂದು ನಾನೇಕೆ ತಲೆ ಕೆಡೆಸಿಕೊಳ್ಳಲಿ ಎಂದರು.

ನಾನು ಯಾವುದೇ ಸಭೆಯನ್ನು ಮುಚ್ಚು ಮರೆಯಾಗಿ ಮಾಡುತ್ತಿಲ್ಲ. ನನಗೆ ಯಾರ ಬಗ್ಗೆಯೂ ಭಯವಿಲ್ಲ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವುದು ನಿಜ. ಅದಕ್ಕಾಗಿಯೇ ಜಿಪಂ ಸದಸ್ಯರ ಸಭೆ ಕರೆದು ಮಾತನಾಡಿದ್ದೇನೆ ಎಂದರು.

ಕೆಆರ್‌ಎಸ್‌ನಿಂದ ಮೇಲುಕೋಟೆಗೆ ತಲುಪಿ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿಖಿಲ್‌ ಚುನಾವಣೆ ಸಂದರ್ಭದಲ್ಲಿ ರೈತರ ಪರ ಉದ್ದುದ್ದ ಭಾಷಣ ಮಾಡುತ್ತಿಲ್ಲ. ಆತ್ಮಹತ್ಯೆ ಮಾಡಿ

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ