ಹಾಸನ :  ಎಚ್.ಡಿ. ರೇವಣ್ಣ ಹಾಗೂ ಎ ಮಂಜು ವಾಕ್ ಪ್ರಹಾರ ಮುಂದುವರಿದಿದೆ. ಇದೀಗ ರೇವಣ್ಣ ವಿರುದ್ಧ ಹಾಸನ ಬಿಜೆಪಿ ಅಭ್ಯರ್ಥಿ ವಾಗ್ದಾಳಿ ನಡೆಸಿದ್ದಾರೆ. 

ಮೇವು ಎಲ್ಲಿರುತ್ತದೆಯೋ ಅಲ್ಲಿಗೆ ಹೋಗುತ್ತಾರೆ ಎನ್ನುವ ರೇವಣ್ಣ ಹೇಳಿಕೆಗೆ ಮಂಜು ತಿರುಗೇಟು ನೀಡಿದ್ದು, ನಾನೇನಾ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದು, ನಾನೇನಾ, ಕಾಂಗ್ರೆಸ್ ಜೊತೆಗೆ ಸೇರಿ ಸರ್ಕಾರ ರಚಿಸಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. 

ಯಾರು ಮೇಯಲು ಹೋಗಿದ್ದರು. ಅಪ್ಪ ಮಕ್ಕಳು ಯಾರ ಜೊತೆ ಸೇರಿಕೊಂಡಿದ್ದರು, ಯಾರ ಜೊತೆ ಸರ್ಕಾರ ಮಾಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೇಯಲು ಹೋಗೋದನ್ನು ಜಗತ್ತಿಗೆ ಕಲಿಸಿದ್ದೆ ಜೆಡಿಎಸ್ ಎಂದು ಕಿಡಿಕಾರಿದ್ದಾರೆ. 

ಒಬ್ಬ  26,27 ವರ್ಷದವನು ಇಂಡಸ್ಟ್ರಿ ಇಲ್ಲ, ಕೆಲಸ ಇಲ್ಲ ಬರೀ 20 ಹಸುವಿನಲ್ಲಿ ಒಂಬತ್ತೂವರೆ ಕೋಟಿ ಅಸ್ತಿ ಬಂದಿದೆ ಎಂದರೆ ಯಾವ ರೀತಿ ಆಸ್ತಿ ಬಂತೆಂದು ಅವರು ಹೇಳಬೇಕು. ಅವರ ಹೆಸರಿನಲ್ಲಿ ಕಂಪನಿ ಇರುವುದರ ದಾಖಲೆ ಸಮೇತ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಅದನ್ನು ಸಾಬೀತು ಮಾಡಲು ಎಂದು ಸವಾಲು ಹಾಕಿದ್ದಾರೆ.

ರೇವಣ್ಣ ಸಿದ್ದರಾಮಯ್ಯ ಮನೆ ಬಾಗಿಲಲ್ಲಿ ಫೈಲ್ ಹಿಡಿದು  ಕಾಯುತ್ತಿದ್ದರು.  ಪೊಲೀಸರು ಬರುವುದಕ್ಕೂ ಮೊದಲೇ ಸಿದ್ದರಾಮಯ್ಯ ಮನೆ ಬಾಗಿಲ್ಲಿ ಕಾಯುತ್ತಿದ್ದರು ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ವಾಗ್ದಾಳಿ ನಡೆಸಿದ್ದಾರೆ. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ