ಮಂಡ್ಯ[ಮಾ. 12]  ‘ಜೆಡಿಎಸ್‌ ಗೆ ಮತ ಕೇಳಿದ್ರೆ ಜನ ನಮ್ಮನ್ನ ಹೊಡಿತಾರೆ’ ಎಂದು ಚೆಲುವರಾಯಸ್ವಾಮಿ ಆಪ್ತ, ನಾಗಮಂಗಲ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹೇಳಿದ್ದಾರೆ.

ಜೆಡಿಎಸ್‌ ಪರ ಮತಯಾಚನೆಗೆ ಹೋದ್ರೆ ನಮ್ಮನ್ನ ಹೊಡಿತಾರೆ. ಹೊರಗಿನ ಅಭ್ಯರ್ಥಿ ಪರ ಮತಯಾಚನೆ ಮಾಡಬಾರದೆಂದು ಹೊಡಿತೀವಿ ಎಂದು ಹೆದರಿಸುತ್ತಿದ್ದಾರೆ. ಹೈಕಮಾಂಡ್ ಖಡಕ್ ಎಚ್ಚರಿಕೆ ಕೊಟ್ಟರೂ ನಮ್ಮ ಮಾತು ಕೇಳೋರು ಯಾರು ಇಲ್ಲ. ನಾವು ಲೋಕಲ್ ಜನರನ್ನ ಬಿಟ್ಟು ರಾಜಕೀಯ ಮಾಡೋಕಾಗಲ್ಲ ಎಂದು ಆತಂಕ ತೋಡಿಕೊಂಡಿದ್ದಾರೆ.

ಕೆಪಿಸಿಸಿ ಪಟ್ಟಿಗೂ ಮುನ್ನವೇ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ!?

ಬೇರೆ ಜಿಲ್ಲೆಗಳ ಜನರನ್ನ ಕಟ್ಕೊಂಡು ನಾವು ರಾಜಕೀಯ ಮಾಡೋಕಾಗುತ್ತಾ? ಕಾರ್ಯಕರ್ತರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ.  ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ನಾವು ತೆಪ್ಪಗಿರಬೇಕು. ಅದನ್ನ ಬಿಟ್ಟು ಜೆಡಿಎಸ್ ಪರ ಮತಯಾಚನೆಗೆ ಹೋದರೆ ನಮಗೆ ಥಳಿಸ್ತಾರೆ ಎಂದಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರೆಲ್ಲಾ ಅಂಬರೀಶ್ ಅಭಿಮಾನಿಗಳ ಜೊತೆ ಸೇರಿದ್ದಾರೆ. ಹೀಗಾಗಿ ನಾವೆಲ್ಲಾ ಸುಮಲತಾಗೆ ಟಿಕೆಟ್‌ ಸಿಗುತ್ತೆ ಸುಮ್ಮನಿರಿ ಅಂತ ಹೇಳ್ತೀದ್ದೀವಿ. ಈಗಲೂ‌ ನಮಗೆ ವಿಶ್ವಾಸವಿದೆ ಸುಮಲತಾಗೆ ಜೆಡಿಎಸ್ ಟಿಕೆಟ್ ಸಿಗುತ್ತೆ. ಅಂಬರೀಶ್‌ ಮೇಲೆ ಕುಮಾರಸ್ವಾಮಿಗೆ ಅಪಾರ ಗೌರವವಿದೆ.ಜೆಡಿಎಸ್‌ನಲ್ಲಿ ಕೊನೆ ಘಳಿಗೆವರೆಗೂ ಏನನ್ನೂ ಹೇಳೋಕಾಗಲ್ಲ. ಬಿ ಫಾರಂ ಬೇರೆಯವರಿಗೆ ಕೊಟ್ಟರೂ ಸಿ ಫಾರಂ ಸುಮಲತಾಗೆ ಕೊಟ್ಟರೂ ಕೊಡಬಹುದು ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಕುಣಿಗಲ್ ಮದ್ದೂರಿನಲ್ಲಿ ಈ ಹಿಂದೆ ಜೆಡಿಎಸ್‌ನಲ್ಲಿ ಸಿ ಫಾರಂ ಕೊಟ್ಟಿಲ್ಲವೆ?  ಮಕ್ಕಳು ರಚ್ಚೆ ಹಿಡಿದಾಗ ಪಪ್ಪರ್‌ಮೆಂಟ್ ಕೊಟ್ಟು ಸುಮ್ಮನಿರಿಸಿದಂತೆ ನಮಗೇ ಟಿಕೆಟ್ ಕೊಟ್ಟರೂ ಕೊಡಬಹುದು.  ಕೊನೆ ಘಳಿಗೆವರೆಗೂ ನಾವು ಹಠ ಹಿಡಿಯುತ್ತೇವೆ ಎಂದು  ಹೇಳಿದ್ದಾರೆ.