ಗೋಕಾಕ್ : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪಕ್ಷಗಳಲ್ಲಿ ಬಿರುಸಿನ ಪ್ರಚಾರವೂ ನಡೆಯುತ್ತಿದೆ. ಗೆಲುವಿಗಾಗಿ ಕಸರತ್ತು ನಡೆಸುತ್ತಿರುವ ನಾಯಕರು ಮತದಾರರ ಮನಗೆಲ್ಲುವ ಯತ್ನದಲ್ಲಿದ್ದಾರೆ. 

ಬೆಳಗಾವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಅಭ್ಯರ್ಥಿ ಸುರೇಶ್ ಅಂಗಡಿ ಪರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಪ್ರಚಾರ ಮಾಡಿ ನಾಲ್ಕನೆ ಬಾರಿಯೂ ಗೆಲ್ಲಿಸಲು ಮನವಿ ಮಾಡಿದರು. 

ಇದೇ ವೇಳೆ ರಾಜ್ಯ ರಾಜಕೀಯ ಹೊಸ ಬೆಳವಣಿಗೆಯ ಸುಳಿವೊಂದನ್ನು ನೀಡಿದರು.  ಕಾಂಗ್ರೆಸ್ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಶೀಘ್ರ ಬಿಜೆಪಿ ಸೇರುವ ಸುಳಿವು ನೀಡಿದರು. 

ಅಲ್ಲದೇ ದೋಸ್ತಿ ಸರ್ಕಾರವೂ ಶೀಘ್ರದಲ್ಲೇ ಪತನವಾಗಲಿದೆ ಎನ್ನುವ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಅವರು, ಮುಂದಿನ ರಾಜಕೀಯ ವಿಚಾರಗಳ ಬಗ್ಗೆ ಸುಳಿವು ನೀಡಲು ಸಾಧ್ಯವಿಲ್ಲ ಎಂದರು. 

ಅಲ್ಲದೇ ಈ ಬಾರಿಗೆ ಬಿಜೆಪಿಗೆ ಗೋಕಾಕ, ಅರಬಾವಿಯಲ್ಲಿ ಮತ್ತೊಂದು ಶಕ್ತಿ ಸಿಕ್ಕಿದೆ. ಆ ಶಕ್ತಿಯಿಂದ ಸುರೇಶ ಅಂಗಡಿಗೆ 2 ಲಕ್ಷಕ್ಕೂ ಅಧಿಕ ಲೀಡ್ ಕೊಡಬೇಕು ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಬಿಜೆಪಿಗೆ ಸೇರ್ಪಡೆಯಾಗುವ ಮಾತನಾಡಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.