ಹಾಸನ/ಹೊಳೆನರಸೀಪುರ: ‘9’ ಅನ್ನೋದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಕಂಟಕವಾಗಲಿದೆ ಎಂದು ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪುನರುಚ್ಚಾರ ಮಾಡಿದ್ದಾರೆ.

ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 1989, 1999 ರಲ್ಲಿ ದೇವೇಗೌಡರಿಗೆ ಸೋಲಾಗಿತ್ತು. 

2019 ರಲ್ಲಿಯೂ ದೇವೇಗೌಡರಿಗೆ ಮತ್ತು ಅವರ ಮೊಮ್ಮಕ್ಕಳಿಗೆ ಸೋಲಾಗಲಿದೆ. ಈ ಬಾರಿ ಲೋಕಸಭಾ ಚುನಾವಣಾ ದಿನಾಂಕ ಕೂಡ 18 ರಂದು ಬಂದಿದೆ. 8+1  ರಲ್ಲೂ 9 ಇದೆ. ಹೀಗಾಗಿ ಅವರಿಗೆ 9 ಅನ್ನೋದು ಕಂಟಕವಾಗಿದೆ ಎಂದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ