Asianet Suvarna News Asianet Suvarna News

ಲೋಕಸಭಾ ಎಲೆಕ್ಷನ್: ಸೋಮವಾರ 5 ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ ಕರ್ನಾಟಕ

ಪೊಲಿಟಿಕಲ್ ಬಿಗ್ ಡೇಗೆ ಸಾಕ್ಷಿಯಾಗಲಿದೆ ಸೋಮವಾರ (ಮಾ.18) | ಪ್ರಚಾರ, ಪಟ್ಟಿ, ಪಕ್ಷಾಂತರ ಸೇರಿ ರಾಜಕೀಯ ಬೆಳವಣಿಗೆಗೆ ಸೋಮವಾರ ಸಾಕ್ಷಿ| ಹಲವು ಬೆಳವಣಿಗೆಯಿಂದ ರಾಜ್ಯ ಹಾಗೂ ರಾಷ್ಟ್ರದಲ್ಲಿ ರಾಜಕೀಯ ಕಂಪನ| ರಾಜಕೀಯ ಸಂಚಲನದಿಂದ ನಾಯಕರಲ್ಲಿ ಶುರುವಾಗಿದೆ ಢವ ಢವ.

Loksabha Elections 2019 5 Major Developments In Karnataka on March 18th
Author
Bengaluru, First Published Mar 17, 2019, 6:46 PM IST

ಬೆಂಗಳೂರು, [ಮಾ.17]: ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವು ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ. ಈ ಬೆನ್ನಲ್ಲೇ ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಬಿರುಸಾಗಿ ಸಾಗುತ್ತಿದ್ದು, ನಾಳೆ ಅಂದರೆ ಸೋಮವಾರ (ಮಾ.18) ರಾಜ್ಯ  ಪೊಲಿಟಿಕಲ್ ಬಿಗ್ ಡೇಗೆ ಸಾಕ್ಷಿಯಾಗಲಿದೆ 

ಬೆಂಗ್ಳೂರು ಉತ್ತರ: ದೊಡ್ಡಗೌಡ್ರಿಗೆ ನಡುಕ ಹುಟ್ಟಿಸಿದ ಸಿದ್ದರಾಮಯ್ಯ ಶಿಷ್ಯಂದಿರು..!

ನಾಳೆ [ಸೋಮವಾರ] ಪ್ರಚಾರ, ಪಟ್ಟಿ, ಪಕ್ಷಾಂತರ ಸೇರಿದಂತೆ ಪ್ರಮುಖ 5 ರಾಜಕೀಯ ಬೆಳವಣಿಗೆಗಳಿಗೆ ರಾಜ್ಯ ಸಾಕ್ಷಿಯಾಗಲಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಹಲವು ರಾಜಕೀಯ ಸಂಚಲನದಿಂದ ನಾಯಕರಲ್ಲಿ ಢವ ಢವ ಶುರುವಾಗಿದೆ ಶುರುವಾಗಿದೆ. ಹಾಗಾದ್ರೆ ಆ ಐದು ಬೆಳವಣಿಗೆಗಳೇನು..? ಇಲ್ಲಿವೆ ನೋಡಿ.

ಮಂಡ್ಯ ಲೋಕಸಭಾ: ಮಾದೇಗೌಡ್ರ ಬೆಂಬಲ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆ..!

ಬೆಳವಣಿಗೆ 1:
ರಾಜ್ಯದೆಲ್ಲೆಡೆ ಸುದ್ದು ಮಾಡುತ್ತಿರುವ ಸುಮಲತಾ ಅಂಬರೀಶ್ ಅವರ ರಾಜಕೀಯ ನಡೆ ನಾಳೆ [ಸೋಮವಾರ] ನಿರ್ಧಾರವಾಗಲಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಲಿದ್ದಾರಾ..?, ಸ್ವತಂತ್ರ ಕ್ಯಾಂಡಿಡೇಟ್ ಆಗಲಿದ್ದಾರಾ..? ಅಥವಾ ಬಿಜೆಪಿಯಿಂದ ಸ್ಪರ್ಧೆ ಮಾಡ್ತಾರಾ..? ಇವೆಲ್ಲವುಗಳ ಪ್ರಶ್ನೆಗಳಿಗೆ ಸ್ವತಃ ಸುಮಲತಾ ಅಂಬರೀಶ್ ಅವರೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ತರಿಸಲಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಬೆಳವಣಿಗೆ 2: 
ಇಂದು [ಭಾನುವಾರ] ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಮುಕ್ತಾಯವಾಗಿದ್ದು,  ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ರಾಜ್ಯ ನಾಯಕರು ಅಂತಿಮಗೊಳಿಸಿದ್ದಾರೆ. ಈ ಪಟ್ಟಿಯನ್ನ ಹಿಡಿದು ಬಿ ಎಸ್ ಯಡಿಯೂರಪ್ಪ ದೆಹಲಿ ವಿಮಾನ ಏರಿದ್ದು,ನಾಳೆ [ಸೋಮವಾರ] ಅಮಿತ್ ಶಾ ಜೊತೆ ಒಂದು ಸುತ್ತಿನ ಮಾತುಕತೆ ಬಳಿಕ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಲಿದೆ. ಬಳಿಕ ಮೊದಲ ಪಟ್ಟಿ ಪ್ರಕಟವಾಗಲಿದೆ.

ಬೆಳವಣಿಗೆ 3: 
ಅತಿ ಮುಖ್ಯವಾದ ಬೆಳವಣಿಗೆ ಅಂದ್ರೆ ಅದು ದೇವೇಗೌಡ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು. ಹೌದು.. ಬೆಂಗಳೂರು ಉತ್ತರ ಹಾಗೂ ತುಮಕೂರು ಕ್ಷೇತ್ರಗಳು ದೇವೇಗೌಡರ ಮುಂದೆ ಇದ್ದು, ಇವೆರಡರಲ್ಲಿ ಯಾವ ಕ್ಷೇತ್ರದಿಂದ ಅಖಾಡಕ್ಕಿಳಿಯುತ್ತಾರೆ ಎನ್ನವ ಕುತೂಹಲಕ್ಕೆ ನಾಳೆ [ಸೋಮವಾರ] ತೆರೆ ಬೀಳಲಿದೆ.

ಬೆಳವಣಿಗೆ 4:
ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸಿದರೆ ಮಾತ್ರ ನಮ್ಮ ಬೆಂಬಲ ಎನ್ನುತ್ತಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎ. ಮಂಜು, ಈಗ ಪ್ರಜ್ವಲ್​ ಅಧಿಕೃತ ಅಭ್ಯರ್ಥಿಯಾದ ಬೆನ್ನಲ್ಲೇ ಬಿಜೆಪಿ ಸೇರಲು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ತಮ್ಮ ನಿರ್ಧಾರವನ್ನು ನಾಳೆ [ಸೋಮವಾರ] ಪ್ರಕಟಿಸಲಿದ್ದಾರೆ.

ಬೆಳವಣಿಗೆ 5: 
ಇನ್ನು ರಾಜ್ಯದಲ್ಲಿ ನಡೆಯುವ ಕೊನೆ ಬೆಳವಣಿಗೆ ಅಂದ್ರೆ ಅದು ಕಾಂಗ್ರೆಸ್ ಸಮಾವೇಶ. ನಾಳೆ [ಸೋಮವಾರ] ಕಲಬುರಗಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಣಕಹಳೆ ಮೊಳಗಿಸಲಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪನಿ ಮಲೀಕರ ಜತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.

"

Follow Us:
Download App:
  • android
  • ios