Asianet Suvarna News Asianet Suvarna News

SC/ST ವರ್ಗದ ಮನಗೆದ್ದ ಮೋದಿ; ಈ ಬಾರಿ ಎಷ್ಟೊಂದು ಸಂಸದರಿದ್ದಾರೆ ನೋಡಿ!

ದಲಿತ-ವಿರೋಧಿ, ಮೀಸಲಾತಿ ವಿರೋಧಿ ಎಂಬುವುದು ಬಿಜೆಪಿಯ ಮೇಲೆ ಇತರರು ಮಾಡುವ ಆರೋಪಗಳಲ್ಲೊಂದು. ಆದರೆ ಲೋಕಸಭಾ ಫಲಿತಾಂಶ ಬೇರೆಯೇ ಕಥೆಯನ್ನು ಹೇಳುತ್ತಿದೆ.

Loksabha Election Results BJP Performance in SC ST seats
Author
Bengaluru, First Published May 23, 2019, 7:06 PM IST

ಈವರೆಗೆ ಪ್ರಕಟವಾದ ಲೋಕಸಭಾ ಫಲಿತಾಂಶದ ಮೇಲೆ ಕಣ್ಣಾಡಿಸಿದಾಗ ಬಿಜೆಪಿಯು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಮನಸ್ಸನ್ನು ಗೆದ್ದಿರುವುದು ಕಂಡುಬರುತ್ತಿದೆ.

SC/ST ಮೀಸಲು ಕ್ಷೇತ್ರಗಳಲ್ಲಿ 2014ಕ್ಕೆ ಹೋಲಿಸಿದಾಗ  ಬಿಜೆಪಿಯು ತನ್ನ ಬಲಾಬಲವನ್ನು ಹೆಚ್ಚಿಸಿದೆ. ಪರಿಶಿಷ್ಟ ಜಾತಿಗೆ (SC) ಮೀಸಲಾಗಿರುವ 84 ಸೀಟುಗಳಲ್ಲಿ 44 ಕಡೆ ಬಿಜೆಪಿಯು ಮುನ್ನಡೆ ಸಾಧಿಸಿದೆ.

ಪರಿಶಿಷ್ಟ ಜಾತಿಗೆ (ST) ಮೀಸಲಾಗಿರುವ 47 ಕ್ಷೇತ್ರಗಳ ಪೈಕಿ, ಬಿಜೆಪಿ 30 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಇದನ್ನೂ ಓದಿ | ಲೋಕಸಭಾ ಫಲಿತಾಂಶ ಪ್ರಕಟ: 'ಚೌಕೀದಾರ್' ಹೆಸರು ತೆಗೆದು ಹಾಕಿದ ಮೋದಿ!

 ಕರ್ನಾಟಕದ 5 SC ಮೀಸಲು ಕ್ಷೇತ್ರಗಳಲ್ಲೂ (ಚಿತ್ರದುರ್ಗ, ಚಾಮರಾಜನಗರ, ಕೋಲಾರ, ವಿಜಯಪುರ, ಮತ್ತು ಕಲಬುರಗಿ ) ಬಿಜೆಪಿಯು ಜಯಭೇರಿ ಬಾರಿಸಿದೆ.ರಾಜ್ಯದ 2 ST ಮೀಸಲು ಕ್ಷೇತ್ರಗಳಲ್ಲಿ ( ರಾಯಚೂರು ಮತ್ತು ಬಳ್ಳಾರಿ) ಕೂಡಾ ಬಿಜೆಪಿಯು ವಿಜಯಪತಾಕೆ ಹಾರಿಸಿದೆ.

ಒಟ್ಟು ಸೇರಿಸಿದರೆ ಸಂಸತ್ತಿನ ಸುಮಾರು ಕಾಲು ಭಾಗದಷ್ಟಿರುವ (131)  SC/ ST ಸಂಸದರ ಪೈಕಿ ಬಿಜೆಪಿಯು ಸುಮಾರು 74 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. 2014ರಲ್ಲಿ ಬಿಜೆಪಿಯ SC/ST ಸಂಸದರ ಸಂಖ್ಯೆ 66 ಆಗಿತ್ತು. 

ಕರ್ನಾಟಕದ ಹೊಸ ರಾಜಕೀಯ ಭೂಪಟ:

Loksabha Election Results BJP Performance in SC ST seats

ಭಾರತದ ಹೊಸ ರಾಜಕೀಯ ಭೂಪಟ:

Loksabha Election Results BJP Performance in SC ST seats

Follow Us:
Download App:
  • android
  • ios