Asianet Suvarna News Asianet Suvarna News

ಲೋಕಸಭಾ ಫಲಿತಾಂಶ ಪ್ರಕಟ: 'ಚೌಕೀದಾರ್' ಹೆಸರು ತೆಗೆದು ಹಾಕಿದ ಮೋದಿ!

ಲೋಕ ಚುನಾವಣೆ ಗೆಲ್ಲುತ್ತಿದ್ದಂತೆಯೇ ಟ್ವಿಟರ್ ಖಾತೆಯಿಂದ 'ಚೌಕೀದಾರ್' ಹೆಸರು ಅಳಿಸಿ ಹಾಕಿದ ಮೋದಿ| ಚುನಾವಣಾ ಪ್ರಚಾರದಲ್ಲಿ 'ಚೌಕೀದಾರ್' ಎಂದೇ ಸೌಂಡ್ ಮಾಡಿದ್ದ ಪ್ರಧಾನಿ ಮೋದಿ

Chowkidar No More PM Modi Removes Prefix from His Twitter Handle After Resounding Election Victory
Author
Bangalore, First Published May 23, 2019, 6:35 PM IST

ನವದೆಹಲಿ[ಮೇ.23]: ಲೋಕಸಭಾ ಚುನಾವಣಾ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ NDA ಸರ್ಕಾರ ರಚಿಸುವುದು ಖಚಿತವಾಗಿದೆ. ಮೋದಿ ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಯಾಗಲಿದ್ದಾರೆ. ಆದರೆ ಚುನಾವಣಾ ಪ್ರಚಾರದ ವೇಳೆ ನಾನೂ ಚೌಕೀದಾರ್ ಎನ್ನುವ ಮೂಲಕ ಸದ್ದು ಮಾಡಿದ್ದ ಪ್ರಧಾನಿ ಮೋದಿ, ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ತಮ್ಮ ಟ್ವಿಟರ್ ಖಾತೆಯಿಂದ ಚೌಕೀದಾರ್ ಎಂಬ ಪದವನ್ನೇ ತೆಗೆದು ಹಾಕಿದ್ದಾರೆ.

ಹೌದು 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಚರ್ಚಿತವಾದ ವಿಚಾರ 'ಚೌಕೀದಾರ್'. ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೇಳೆ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ 'ಚೌಕೀದಾರ್ ಚೋರ್ ಹೆ' ಎಂದಿದ್ದರು. ರಾಹುಲ್ ಈ ಹೇಳಿಕೆಯನ್ನೇ ಸಮರ್ಥವಾಗಿ ಬಳಸಿಕೊಂಡಿದ್ದ ಪ್ರಧಾನಿ ಮೋದಿ 'ಮೇಂ ಭೀ ಚೌಕೀದಾರ್' ಎಂಬುವುದನ್ನೇ ತಮ್ಮ ಭಾಷಣಗಳಲ್ಲಿ ಬಳಸಿಕೊಂಡಿದ್ದರು. ಆದರೆ ರಾಹುಲ್ ಗಾಂಧಿ ವಾಗ್ದಾಳಿ ತೀವ್ರಗೊಂಡಾಗ ಪ್ರಧಾನಿ ಮೋದಿ ಸೇರಿದಂತೆ ಬಹುತೇಕ ಎಲ್ಲಾ ನಾಯಕರು ಟ್ವಿಟರ್ ಖಾತೆಯಲ್ಲಿ ತಮ್ಮ ಹೆಸರಿನ ಎದುರು 'ಚೌಕೀದಾರ್' ಎಂದು ಸೇರ್ಪಡೆಗೊಳಿಸಿದ್ದರು.

ಆದರೀಗ ಚುನಾವಣಾ ಫಲಿತಾಂಶ ಪ್ರಕಟಗೊಂಡ, ಬಿಜೆಪಿ ಪಕ್ಷ ಬಹುಮತ ಪಡೆಯುವುದು ಸ್ಪಷ್ಟವಾಗುತ್ತಿದ್ದಂತೆಯೇ ಟ್ವಿಟರ್ ಖಾತೆಯಲ್ಲಿ ಮೋದಿ ಹೆಸರಿನೆದುರಿದ್ದ ಚೌಕೀದಾರ್ ಪದ ಮಾಯವಾಗಿದೆ. ಇದಕ್ಕೇನು ಕಾರಣ? ಎಂಬುವುದಕ್ಕೆ ಟ್ವೀಟ್ ಒಂದರ ಮೂಲಕ ಖುದ್ದು ಮೋದಿ ಉತ್ತರಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ 'ಚೌಕೀದಾರ್ ಎಂಬ ಶಕ್ತಿಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಸಮಯ ಬಂದಿದೆ. ಈ ಸ್ಪೂರ್ತಿಯನ್ನು ಪ್ರತಿ ಕ್ಷಣ ನಿಮ್ಮಲ್ಲಿರಲಿ ಈ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸೋಣ. ಇಂದು ನನ್ನ ಟ್ವಿಟರ್ ಖಾತೆಯಿಂದ ಚೌಕೀದಾರ್ ಎಂಬ ಹೆಸರು ಹೊರಟು ಹೋಗುತ್ತದೆ. ಆದರೆ ಇದು ನನ್ನ ಜೀವನದ ಅವಿಭಾಜ್ಯ ಅಂಗವಾಗಿ ಸದಾ ಉಳಿದುಕೊಳ್ಳುತ್ತದೆ. ನೀವೆಲ್ಲರೂ ಇದೇ ರೀತಿ ಮಾಡಿ ಎಂದು ವಿನಂತಿಸುತ್ತೇನೆ' ಎಂದಿದ್ದಾರೆ.

Follow Us:
Download App:
  • android
  • ios