ಚಾಮರಾಜನಗರ(ಮೇ.23) ಹಗ್ಗ ಜಗ್ಗಾಟ, ಗಡಿಯಾರದ ಲೋಲಕದಂತೆ ಅತ್ತಿಂದ ಇತ್ತ ಇತ್ತಿಂದ ಅತ್ತ  ಹೊರಳಾಡುತ್ತಿದ್ದ ವಿಜಯದ ಮಾಲೆ ಅಂತಿಮವಾಗಿ ಬಿಜೆಪಿಯ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಹೆಗಲಿಗೆ ಬಿದ್ದಿದೆ.

ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಸಂಸದ ಹಾಗೂ ದೋಸ್ತಿ ಅಭ್ಯರ್ಥಿ ಧ್ರುವನಾರಾಯಣ ಹಳೆಯ ರಾಜಕೀಯ ಗುರು ಶ್ರೀನಿವಾಸ್ ಪ್ರಸಾದ್ ಎದುರು ಮಂಡಿಯೂರಿ ವಿರೋಚಿತ ಸೋಲು ಕಂಡಿದ್ದಾರೆ. 

ದೇವೇಗೌಡರ ಕುಟುಂಬಕ್ಕೆ ದೊಡ್ಡ ಹೊಡೆತ ಬೀಳಲು ಕಾರಣಿಕರ್ತ ಯಾರು?

ಗುರು -ಶಿಷ್ಯರ ನಡುವಿನ ಕದನ ಜೋರಾಗಿದ್ದು, 20ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಹಾಲಿ ಸಂಸದ ಧ್ರುವನಾರಾಯಣ ವಿರುದ್ಧ ಮುನ್ನಡೆ ಸಾಧಿಸಿದ್ದರು. ಕೆಲ ಗೊಂದಲಗಳಿದ್ದರೂ ಅದನ್ನು ನಿವಾರಿಸಿಕೊಂಡು ಮತ ಎಣಿಕೆ ಮುಂದುವರಿಸಲಾಯಿತು. ಅಂತಿಮವಾಗಿ ಶ್ರೀನಿವಾಸ್ ಪ್ರಸಾದ್ ಅವರೊಗೆ 838 ಮತಗಳ ಅಂತರದ ಗೆಲುವು ದಕ್ಕಿದೆ.  ಬಿಎಸ್ ಪಿ ಯ ಅಭ್ಯರ್ಥಿ ಎಂಭತ್ತಾರು ಸಾವಿರ ಮತ ಪಡೆದುಕೊಂಡಿದ್ದು ಕಾಂಗ್ರೆಸ್ ಗೆ ಮುಳುವಾಯಿತು.