ಬೆಂಗಳೂರು(ಮೇ. 23)  ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಸರಕಾರದ ತೀರ್ಮಾನದಂತೆ ಜೆಡಿಎಸ್ ಕೊನೆ ಕ್ಷಣದಲ್ಲಿ ಏಳು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಅದರಲ್ಲಿ ಮೂರು ಕಡೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರೆ  ಸ್ಪರ್ಧೆ ಮಾಡಿದ್ದರು. ಆದರೆ ಗೆಲುವಿನ ಸಿಹಿ ಸಿಕ್ಕಿದ್ದು ದೇವೇಗೌಡರ ಪುತ್ರ ರೇವಣ್ಣ, ರೇವಣ್ಣರ ಪುತ್ರ ಪ್ರಜ್ವಲ್ ಗೆ ಮಾತ್ರ.

ನಿಖಿಲ್ ಕುಮಾರಸ್ವಾಮಿ ಸುಮಲತಾ ಅಂಬರೀಶ ವಿರುದ್ಧ ಸೋಲು ಕಂಡರು. ಇನ್ನೊಂದು ಕಡೆ ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಲು ಕಾಣಬೇಕಾಗಿ ಬಂದಿತು.

ಮಂಡ್ಯದಲ್ಲಿ ನಿಖಿಲ್ ಸೋಲು ಮತ್ತು ತುಮಕೂರಿನಲ್ಲಿ ದೇವೇಗೌಡರ ಸೋಲು ಜೆಡಿಎಸ್ ಗೆ ಎಳಲಾರದ ಏಟು ಕೊಟ್ಟಿರುವುದು ಸುಳ್ಳಲ್ಲ.  ದೋಸ್ತಿ ಸರಕಾರದಲ್ಲಿ ಸಿಎಂ ಸ್ಥಾನವನ್ನೇ ಹೊಂದಿರುವ ಜೆಡಿಎಸ್ ಕಳೆದ ಸಾರಿಯ ಫಲಿತಾಂಶ ನೀಡಲಾಗುವುದುದಕ್ಕೂ ವಿಫಲವಾಗಿದೆ.

ದೋಸ್ತಿ ಸರಕಾರದ ಹೊಂದಾಣಿಕೆ ಕೊರತೆ, ಕೆಲವೆಡೆ ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸದೇ ಇರುವುದು ಜೆಡಿಎಸ್ ಗೆ ದೊಡ್ಡ ಮುಳುವಾಗಿದೆ. ಇನ್ನೊಂದು ಕಡೆ ಜನರು ಸಹ ಜೆಡಿಎಸ್ ನಾಯಕರ ಆಶ್ವಾಸನೆಗಳನ್ನು, ಭರವಸೆಗಳನ್ನು ಜನರು ನಂಬುವ ಸ್ಥಿತಿಯಲ್ಲಿಯೂ ಇರಲಿಲ್ಲ