ಚಂಡೀಗಢ: ಉತ್ತರ ಭಾರತೀಯ ರಾಜ್ಯಗಳ ಪೈಕಿ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ ಕೈ ಹಿಡಿದ ರಾಜ್ಯವೆಂದರೆ ಪಂಜಾಬ್.

13 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 8 ಸೀಟುಗಳಲ್ಲಿ ಜಯ ಗಳಿಸಿದರೆ, ಬಿಜೆಪಿ- ಶಿರೋಮಣಿ ಅಕಾಲಿದಳ (NDA) ಮೈತ್ರಿಕೂಟವು 4 ಸೀಟುಗಳಲ್ಲಿ ಗೆಲುವು ಸಾಧಿಸಿದೆ.

ಗೆಲುವು ಸಾಧಿಸಿರುವ ಪ್ರಮುಖರ ಪೈಕಿ ಕಾಂಗ್ರೆಸ್ ನ ಮನೀಶ್ ತಿವಾರಿ, ಬಿಜೆಪಿಯ ಸನ್ನಿ ಡಿಯೋಲ್, ಆಮ್ ಆದ್ಮಿ ಪಕ್ಷದ ಭಗವಂತ್ ಮನ್ನ್ ಸೇರಿದ್ದಾರೆ.

ಇದನ್ನೂ ಓದಿ | ಅಪ್ಪ-ಮಕ್ಕಳಿಂದ ಕಾಂಗ್ರೆಸ್ ಅಧಪತನ: ನಿಜವಾಯ್ತು BSY ಭವಿಷ್ಯ

2014ರಲ್ಲಿ NDA 6 ಸೀಟುಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 4 ಸೀಟುಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (AAP) ಅಚ್ಚರಿ ಮೂಡಿಸಿತ್ತು. ಕಾಂಗ್ರೆಸ್ 3 ಸೀಟುಗಳಿಗೆ ತೃಪ್ತಿಪಟ್ಟುಕೊಂಡಿತ್ತು.

2017ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು SADಯನ್ನು ಮಣಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿತ್ತು. 117 ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು 77 ಸ್ಥಾನಗಳನ್ನು ಪಡೆದರೆ, 20 ಸ್ಥಾನಗಳನ್ನು ಪಡೆಯುವ ಮೂಲಕ AAP ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. NDA ಮೈತ್ರಿಪಕ್ಷಗಳಾದ SAD ಮತ್ತು BJP ಕ್ರಮವಾಗಿ 15 ಮತ್ತು 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.